Bengaluru

ರಾಜ್ಯದ ಜನರ ಬದುಕು ಮುಖ್ಯ, ರಾಜಕಾರಣ ಆಮೇಲೆ: ಗೃಹ ಸಚಿವ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಜನರ ಅನಗತ್ಯ ಓಡಾಟ ತಪ್ಪಿಸಲು ವೀಕೆಂಡ್‌ ಕರ್ಫ್ಯೂ ಜಾರಿಮಾಡಿದೆ. ಜನವರಿ ಒಂಭತ್ತು ಭಾನುವಾರದಿಂದ ಕಾಂಗ್ರೆಸ್‌ ನಾಯಕರು ಮೇಕೆದಾಟು ಯೋಜನೆ ವಿಚಾರವಾಗಿ ಪಾದಯಾತ್ರೆಯನ್ನು ಕೈಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷದ ನಡುವೆ ಹಗ್ಗಜಗ್ಗಾಟ ನಡಿತಾಯಿದೆ. ಪಾದಯಾತ್ರೆ ಕೈ ಬಿಡುವಂತೆ ಬಿಜೆಪಿ ಹೇಳುದ್ರೆ, ಯಾವುದ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವ ಮಾತೇ ಇಲ್ಲ ಎಂದು ಕೈ ನಾಯಕರು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಪಾಲಿಸಲಿದೆ. ಕಾಂಗ್ರೆಸ್‌ ನಾಯಕರಿಗೆ ಒಂದು ಮಾತನ್ನು ಹೇಳುತ್ತೇನೆ ಮೊದಲು ಜನರ ಬದುಕು ಮುಖ್ಯ, ರಾಜಕಾರಣ ಆಮೇಲೆ ಮಾಡಿದರಾಯಿತು ಎಂದು ತಿವಿದಿದ್ದಾರೆ. ಇಲ್ಲವಾದಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಬಿಜೆಪಿ ಮಾಡಿ ತೋರಿಸುತ್ತದೆ ಎಂದಿದ್ದಾರೆ.

ಗೃಹ ಸಚಿವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ..ಏನು ಕೇಸ್‌ ಹಾಕ್ತಾರಾ… ಲೆಟ್‌ ದೆಮ್‌ ಟೇಕ್‌ ಆಕ್ಷನ್‌ ಎಂದು ನಯವಾಗಿ ಉತ್ತರಿಸಿದ್ದಾರೆ.

 

Share Post