ಸೂರತ್ – ವಿಷಾನಿಲ ಸೋರಿಕೆಯಿಂದ 6 ಮಂದಿ ಸಾವು, 22 ಮಂದಿ ಅಸ್ವಸ್ಥ
ಸೂರತ್ : ರಾಸಾಯನಿಕ ಫ್ಯಾಕ್ಟರಿಯ ಬಳಿ ನಿಂತಿದ್ದ ಟ್ಯಾಂಕರ್ನಿಂದ ವಿಷಾನಿಲ ಸೋರಿಕೆಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 22 ಮಂದಿ ಅಸ್ವಸ್ಥರಾಗಿದ್ದಾರೆ. ಸಚಿನ್ ಜಿಐಡಿಸಿ ಪ್ರದೇಶದಲ್ಲಿರುವ ರಾಜ್ಕಮಲ್ ಚಿಕ್ಕಡಿ ಪ್ಲಾಟ್ ನಂ. 362 ಸಮೀಪ ಈ ಅವಘಡ ಸಂಭವಿಸಿದೆ.
ಟ್ಯಾಂಕರ್ ಸಮೀಪ 10 ಮೀಟರ್ ದೂರದಲ್ಲೇ ಕಾರ್ಮಿಕರ ತಂಡವೊಂದು ಮಲಗಿತ್ತು. ಟ್ಯಾಂಕರ್ ಸೋರಿಕೆಯ ಕಾರಣ ಮಲಗಿದ್ದ ಕಾರ್ಮಿಕರಿಗೆ ಉಸಿರು ಕಟ್ಟಿದೆ. ಜೆರ್ರಿ ಕೆಮಿಕಲ್ ತುಂಬಿದ್ದ ಪರಿಣಾಮ ಈ ಅವಘಡ ತೀವ್ರತೆ ಪಡೆದಿದೆ.
ಅಗ್ನಿ ಶಾಮಕದಳದವರ ಸಹಾಯದಿಂದ ಅಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಅಸ್ವಸ್ಥಗೊಂಡವರನ್ನೆಲ್ಲಾ ಸೂರತ್ನ ನ್ಯೂ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ.