Cinema

ಜನವರಿಗಿಲ್ಲ ರಾಧೆ ಶ್ಯಾಮ್‌ ರಿಲೀಸ್‌ ಭಾಗ್ಯ

ಹೈದರಾಬಾದ್‌ : ಕೊರೊನಾ ಮೂರನೇ ಅಲೆಯಿಂದ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಎಲ್ಲಾ ಬಿಗ್‌ ಬಜೆಟ್‌ ಸಿನಿಮಾಗಳು ಕೂಡ ತಮ್ಮ ರಿಲೀಸ್‌ ಡೇಟ್‌ ಅನ್ನು ಪೋಸ್ಟ್‌ ಪೋನ್‌ ಮಾಡುತ್ತಿವೆ. ಇತ್ತೀಚೆಗೆ RRR ಸಿನಿಮಾ ತನ್ನ ರಿಲೀಸ್‌ ಡೇಟ್‌ ಅನ್ನು ಮುಂದೂಡಿತ್ತು. ಈಗ ಪ್ರಭಾಸ್‌ ಮತ್ತು ಪೂಜಾ ಹೆಗ್ಡೆಯ ಬಹು ನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್‌ ಕೂಡ ತನ್ನ ರಿಲೀಸ್‌ ಡೇಟ್‌ ಅನ್ನು ಮುಂದಕ್ಕೆ ಹಾಕಿಕೊಂಡಿದೆ.

ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ತೆರೆ ಕಣಲು ಸಜ್ಜಾಗಿತ್ತು. ಟ್ರೈಲರ್‌ ಮತ್ತು ಹಾಡಿನ ಮೂಲಕ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿರುವ ರಾಧೆ ಶ್ಯಾಮ್‌ ಸಿನಿಮಾಗೆ ಓಟಿಟಿ ದೊಡ್ಡ ಮೊತ್ತದ ಆಫರ್‌ ಕೂಡ ನೀಡಿತ್ತು. ಇದನ್ನು ನಯವಾಗಿಯೇ ತಿರಸ್ಕರಿಸಿದ್ದ ಚಿತ್ರತಂಡ, ಸಿನಿಮಾವನ್ನು ಪ್ರೇಕ್ಷಕರು ಮೊದಲು ದೊಡ್ಡ ಪರದೆಯ ಮೇಲೆ ನೋಡಲಿ ಎಂದು ಹೇಳಿತ್ತು.

RRR ಸಿನಿಮಾ ಪೋಸ್ಟ್‌ಪೋನ್‌ ಮಾಡಿದಾಗಲೂ ಕೂಡ ನಾವು ಜನವರಿ ೧೪ಕ್ಕೆ ಬರುತ್ತಿದ್ದೇವೆ ಎಂದು ಚಿತ್ರತಂಡದ ಹೇಳಿಕೊಂಡಿತ್ತು. ಕೊರೊನಾದಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತಂಡ ರಿಲೀಸ್‌ ಡೇಟ್‌ ಅನ್ನು ಮುಂದಕ್ಕೆ ಹಾಕಿದೆ . ಈ ಬಗ್ಗೆ ಪೂಜಾ ಹೆಗ್ಡೆ ಅವರು ಸ್ವತಃ ಅವರ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಪ್ರಭಾಸ್‌ ವೃತ್ತಿ ಜೀವನದಲ್ಲಿಯೇ ಇದು ಡಿಫರೆಂಟ್‌ ಸಿನಿಮಾ ಎಂದು ಹೇಳಲಾಗ್ತಿದೆ. ಇನ್ನು ಈ ಸಿನಿಮಾ ನಿರ್ದೇಶನ ಮಾಡಿರುವವರು ರಾಧಾಕೃಷ್ಣಕುಮಾರ್.‌ ಈ ಸಿನಿಮಾ ಪ್ಯಾನ್‌ ಇಂಡಿಯಾ ರಿಲೀಸ್‌ ಆಗಲು ಸಜ್ಜಾಗಿದೆ.

 

Share Post