Districts

ಓಂಶಕ್ತಿ ದೇವಾಲಯಕ್ಕೆ ತೆರಳಿದ್ದ ಭಕ್ತರಿಗೆ ಕೊರೋನಾ ಟೆನ್ಷನ್‌

ಮಂಡ್ಯ: ರಾಜ್ಯದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಒಮಿಕ್ರಾನ್‌ ಕೂಡ ವೇಗವಾಗಿ ಹರಡುತ್ತಿದ್ದು, ಜನರಿಗೆ ಆತಂಕ ಶುರುವಾಗಿದೆ. ಆದರೆ ಇಲ್ಲೊಂದು ಗ್ರಾಮದವರು ದೇವಾಲಯಕ್ಕೆ ಅಂತಾ ಹೋದವರಿಗೆ ಕೊರೋನಾ ಟೆನ್ಷನ್‌ ಕಾಡುತ್ತಿದೆ. ಯಾಕಂದರೆ ದೇವಾಲಯಕ್ಕೆ ತೆರಳಿದ್ದ ಕೆಲ ಭಕ್ತರಿಗೆ ಮಹಾಮಾರಿ ಕೊರೋನಾ ಅಂಟಿಕೊಂಡಿದೆ.
ಹೌದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗ್ರಾಮಸ್ಥರು ತಮಿಳುನಾಡಿನ ಸುಪ್ರಸಿದ್ದ ಶ್ರೀ ಕ್ಷೇತ್ರ ಓಂಶಕ್ತಿ ದೇವಾಲಯಕ್ಕೆ ತೆರಳಿದ್ದ ೧೦ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಡಿಸೆಂಬರ್‌ ೩೧ ರಂದು ದೇವಾಲಯಕ್ಕೆ ಹೋಗಿ, ಮಂಗಳವಾರ ವಾಪಾಸ್‌ ಪಟ್ಟಣಕ್ಕೆ ಬಂದಿದ್ದಾರೆ. ಆಗಾ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು,  ಅವರಲ್ಲಿ ೧೦ ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ. ಸದ್ಯ ಸೋಂಕಿತರನ್ನು ಮಳವಳ್ಳಿ ಪಟ್ಟಣದ ಕೋವಿಡ್‌ ಕೇರ್‌  ಸೆಂಟರ್‌ ನಲ್ಲಿ ಇರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಕೂಡ ಕೆಲ ನಿರ್ಬಂಧ ಹೇರಿದ್ದು, ೨ ವಾರಗಳ ಕಾಲ ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ವಿಧಿಸಿದೆ. ಈ ವೇಳೆ ತುರ್ತು ಸೇವೆ ಬಿಟ್ಟು ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್‌ ಹಾಕಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ತಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

 

Share Post