Crime

ಚಲಿಸುತ್ತಿದ್ದ ರೈಲಿನಿಂದ ಜಾರಿಬಿದ್ದು ತಾಯಿ-ಮಗು ದಾರುಣ ಸಾವು

ನಾಗ್ಪುರ​: ಒಂದೂವರೆ ವರ್ಷದ ಮಗುವಿನೊಂದಿಗೆ ಶೌಚಾಲಯಕ್ಕೆ ತೆರಳಿದ್ದ ತಾಯಿಯೊಬ್ಬರು ರೈಲಿನಿಂದ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಮಹಿಳೆಯ ಜೊತೆಗೆ ಮಗು ಕೂಡಾ ಸಾವ್ನ್ನಪ್ಪಿರುವ ಘಟನೆ ಮಹಾರಾಷ್ಟ್ರದ ತುಮ್ಸಾರ್‌ ರೈಲು ನಿಲ್ದಾಣ ಬಳಿ ನಡೆದಿದೆ.

    27 ವರ್ಷದ ಪೂಜಾ ಹಾಗೂ ಒಂದೂವರೆ ವರ್ಷದ ಮಗು ಅಥರ್ವ್‌ ಸಾವನ್ನಪ್ಪಿದವರು. ಪೂಜಾ ತಮ್ಮ ಗಂಡ ಇಶಾಂತ್‌ ಜೊತೆ ಮಧ್ಯಪ್ರದೇಶದ ರೇವಾದಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪೂಜಾ ತಮ್ಮ ಮಗುವಿನೊಂದಿಗೆ ಶೌಚಾಲಯಕ್ಕೆ ತೆರಳಿದ್ದಾರೆ. ಆದರೆ ಎಷ್ಟು ಹೊತ್ತಾದರೂ ವಾಪಸ್‌ ಬಂದಿಲ್ಲ. ಇದರಿಂದ ಗಾಬರಿಗೊಂಡು ಪತಿ ಇಶಾಂತ್‌, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಗಸ್ತಿನಲ್ಲಿದ್ದ ಪೊಲೀಸರಿಗೆ ವೈಗಂಗಾ ನದಿ ಬಳಿ ಮಹಿಳೆ ಮೃತದೇಹ ಸಿಕ್ಕಿದೆ. ನದಿಯಲ್ಲಿ ಮಗುವಿನ ದೇಹ ಸಿಕ್ಕಿದೆ.

ಮಗು ಜಾರಿಬಿದ್ದಿದ್ದರಿಂದ ಅದನ್ನ ರಕ್ಷಿಸಲು ಹೋಗಿ ತಾಯಿಯೂ ರೈಲಿನಿಂದ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Share Post