National

ಶಿಮ್ಲಾದಲ್ಲಿ ಹೆಚ್ಚಾದ ಹಿಮಪಾತ; ಕುಫ್ರಿ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಶಿಮ್ಲಾ: ಚಳಿಗಾಲದಲ್ಲಿ ಹಿಮ ಹೆಚ್ಚಾಗಿರುವುದರಿಂದ ಎಂಜಾಯ್‌ ಮಾಡಲು ಇಲ್ಲಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಈ ಬಾರಿಯೂ ಶಿಮ್ಲಾದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಪ್ರಮುಖ ಪ್ರವಾಸಿ ತಾಣ ಕುಫ್ರಿಯಲ್ಲಿ ಎಂಜಾಯ್‌ ಮಾಡಲು ಪ್ರವಾಸಿಗರ ದಂಡೇ ಬರುತ್ತಿದೆ. ಆದ್ರೆ ಕುಫ್ರಿಯಲ್ಲಿ ಬಾರಿ ಹೆಚ್ಚಿನ ಹಿಮಪಾತವಾಗುತ್ತಿದೆ. ಇದರಿಂದ ಜನರು ಹಿಮಪಾತದಲ್ಲಿ ಸಿಲುಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕುಫ್ರಿಯಲ್ಲಿ ಇಳಿಜಾರು ಪ್ರದೇಶಗಳಿಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಪೊಲೀಸರು ಮೈಕ್‌ಗಳ ಮೂಲಕ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಹಿಮಪಾತ ಹೆಚ್ಚಾಗಿ ಆಗುತ್ತಿರುವುದರಿಂದ ಜೀವಕ್ಕೆ ಅಪಾಯವಿದೆ. ಹೀಗಾಗಿ, ಹಿಮಪಾತ ಹೆಚ್ಚಾಗಿರುವ ಕುಫ್ರಿ ಪ್ರದೇಶಕ್ಕೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತಿದೆ. ಜೊತೆಗೆ ಕುಫ್ರಿ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

Share Post