Lifestyle

ಆಲೂ ಪರೋಟ ಮಾಡುವುದು ಹೇಗೆ?

ಮೈದಾ ಪರೋಟದಿಂದ ಆಲೂ ಪರೋಟದ ರುಚಿ ಹೆಚ್ಚು. ಆಲೂ ಪರೋಟವನ್ನು ಮಾಡಲು ತುಂಬಾ ಸಮಯವೇನು ಬೇಕಾಗಿಲ್ಲ. ಬಲು ಸುಲಭದಲ್ಲಿಯೆ ತಯಾರಿಸಬಹುದು. ಅದಕ್ಕಾಗಿ ನಾವು ಕೆಲವು ಸರಳ ವಿಧಾನಗಳನ್ನು ಇವೆ. ಈ ಉಪಾಯಗಳನ್ನು ಪಾಲಿಸಿದರೆ ಆಲೂ ಪರೋಟ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ.
ಬೇಕಾಗುವ ಸಾಮಾಗ್ರಿಗಳು
ಆಲೂಗೆಡ್ಡೆ 2
ಮೈದಾ 2 ಕಪ್
ಗೋಧಿ
ಒಣಗಿದ ಮಾವಿನ ಪುಡಿ 1 ಚಮಚ
ಚಿಟಿಕೆಯಷ್ಟು ಅಜ್ವೈನ್
ಕತ್ತರಿಸಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಹಸಿಮೆಣಸಿನಕಾಯಿ
ಆಲೂಪರೋಟ ಬೆಳಗ್ಗೆ ಮಾಡಲು ರಾತ್ರಿ ಮೈದಾ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಮಿಶ್ರ ಮಾಡಿ, ರುಚಿಗೆ ತಕ್ಕ ಉಪ್ಪು ಹಾಕಿ ಕಲೆಸಿಡಬೇಕು. ಹಿಟ್ಟು ಮೃದುವಾಗಿರಲು ಕಲೆಸುವಾಗ 2 ಚಮಚ ತುಪ್ಪ ಹಾಕಿರಬೇಕು. ನಂತರ ಹಿಟ್ಟನ್ನು ತೇವವಾದ ಮಸ್ಲೀನ್ ಬಟ್ಟೆಯಿಂದ ಸುತ್ತಿ ಇಡಬೇಕು. ಬೆಳಗ್ಗೆ ಆಲೂಗೆಡ್ಡೆಯನ್ನು ಬೇಯಿಸಬೇಕು. ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಬೇಕು.ಪರೋಟಕ್ಕೆ ತಟ್ಟಲು ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಬೇಕು. ಆಲೂಗೆಡ್ಡೆಯ ಸಿಪ್ಪೆ ಸುಲಿದು ಅದನ್ನು ಚೆನ್ನಾಗಿ ಹಿಸುಕಿ ಅದರಲ್ಲಿ ಕೊತ್ತಂಬರಿ ಸೊಪ್ಪು, ಅಜ್ವೈನ್, ಅಮೆಚ್ಯೂರ್, ಹಸಿಮೆಣಸಿಕಾಯಿ ಹಾಕಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈಗ ಪರೋಟ ಹಿಟ್ಟಿನ ಉಂಡೆಯನ್ನು ಕೈ ಬೆರಳಿನಿಂದ ಸ್ವಲ್ಪ ಗುಂಡಿ ಮಾಡಿ ಅದಕ್ಕೆ ಆಲೂ ಮಿಶ್ರಣವನ್ನು ತುಂಬಿ ಮೈದಾ ಪರೋಟಕ್ಕೆ ತಟ್ಟಿದ ರೀತಿ ತಟ್ಟಬೇಕು.ನಂತರ ಅದನ್ನು ಬೇಯಿಸಿದರೆ ಆಲೂ ಪರೋಟ ರೆಡಿ.

Share Post