Districts

ಶೀಘ್ರವೇ ಮೈಸೂರು- ಗೋವಾ ಹೆಚ್ಚುವರಿ ವಿಮಾನ ಸೇವೆ ಆರಂಭ

ಮೈಸೂರು: ಕಳೆದ ಒಂದು ತಿಂಗಳಿಂದ ಮೈಸೂರು-ಗೋವಾ ಸೇವೆಗೆ ಪ್ರಯಾಣಿಕರಿಂದ ಒತ್ತಡ ಹೆಚ್ಚಾಗಿತ್ತು. ಇದ್ದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು-ಗೋವಾ ನಡುವೆ ಶೀಘ್ರವೇ ಮತ್ತೊಂದು ಹೆಚ್ಚುವರಿ ವಿಮಾನ ಸೇವೆ ಆರಂಭವಾಗಲಿದೆ.
ಪ್ರಸ್ತುತ ಮೈಸೂರು ಗೋವಾ ನಡುವೆ ನಿತ್ಯ ಹಾರಾಟ ನಡೆಸುತ್ತಿರುವ ಏರ್ ಅಲಯನ್ಸ್ ವಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ಇದ್ದು, 65ರಿಂದ 70 ಮಂದಿ ಪ್ರಯಾಣಿಸುತ್ತಿದ್ದಾರೆ ಎಂದಿದ್ದು, ಗೋವಾ ಫ್ಲೈಟ್‍ಗೆ ಬೇಡಿಕೆ ಹೆಚ್ಚಿರುವುದರಿಂದ ಮತ್ತೊಂದು ಟ್ರಿಪ್ ಕಲ್ಪಿಸುವಂತೆ ನಾವು ಅಲಯನ್ಸ್ ಏರ್ ಸಂಸ್ಥೆಗೆ ಮನವಿ ಮಾಡಿ, ಪತ್ರ ವ್ಯವಹಾರ ನಡೆಸುತ್ತಿದ್ದೇವೆ. ಸಕಾರಾತ್ಮಕ ಸ್ಪಂದನೆ ಇರುವುದರಿಂದ ಈ ತಿಂಗಳಿನಿಂದಲೇ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.ನಮ್ಮ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ನಿರ್ಬಂಧ ವಿಧಿಸಿರುವುದರಿಂದ ಜನರು ಗೋವಾ ಕಡೆ ಹೋಗಲು ಆಸಕ್ತಿ ತೋರುತ್ತಿದ್ದರು. ಆದರೆ ಹೆಚ್ಚುವರಿ ವಿಮಾನ ಸೇವೆ ವ್ಯವಸ್ಥೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.

Share Post