Districts

ಮಡಿಕೇರಿ ರಾಜಾಸೀಟ್‌ ಅಭಿವೃದ್ಧಿ; ಪುಟಾಣಿ ರೈಲಿನಲ್ಲಿ ಕಣ್ತುಂಬಿಕೊಳ್ಳಿ

ಮಡಿಕೇರಿ: ಮಡಿಕೇರಿ ಅಂದಾಕ್ಷಣ ನೆನಪಾಗೋದು ರಾಜಾಸೀಟ್‌.. ಆದರೆ ಇತ್ತೀಚಿನ ದಿನಗಳಲ್ಲಿ ರಾಜಾಸೀಟ್‌ ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಹೀಗಾಗಿ, ಕೊನೆಗೂ ಜಿಲ್ಲಾಡಳಿತ ರಾಜಾಸೀಟ್‌ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

   ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್‌ ಅಧ್ಯಕ್ಷತೆಯಲ್ಲಿ, ನಿನ್ನೆ (ಶುಕ್ರವಾರ) ಈ ಕುರಿತು ಅಧಿಕಾರಿಗಳ ಸಭೆ ನಡೆಯಿತು. ರಾಜಸೀಟ್ ಉದ್ಯಾನವನವನ್ನು ಗ್ರೇಟರ್ ರಾಜಸೀಟ್ ಆಗಿ ಅಭಿವೃದ್ಧಿಗೊಳಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನು ರಾಜಾಸೀಟ್ ಉದ್ಯಾನವನ ವ್ಯಾಪ್ತಿಗೆ ರೈಲ್ವೆ ಟ್ರ್ಯಾಕ್ ಸೇರ್ಪಡೆಯಾಗಿದೆ. ಇನ್ನು ಗ್ರೇಟರ್ ರಾಜಾಸೀಟ್ ಆಗಿ ಅಭಿವೃದ್ಧಿಗೊಳಿಸಲು ನೀಲನಕ್ಷೆ ತಯಾರಿಸುವಂತೆ ಜಿಲ್ಲಾಧಿಕಾರಿಗಳು  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  ರಾಜಾಸೀಟ್‌ನಲ್ಲಿ ಪುಟಾಣಿ ರೈಲು ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೆಟ್ಟು ನಿಂತಿರುವ ಮ್ಯೂಸಿಕಲ್‌ ಫೌಂಟೇನ್‌ನ್ನು ಕೂಡಾ ಕೂಡಲೇ ಸರಿಪಡಿಸಬೇಕೆಂದು ಜಿಲ್ಲಾಧಿಕಾರಿ ಸತೀಶ್‌ ಸೂಚನೆ ನೀಡಿದ್ದಾರೆ. ಕೂರ್ಗ್ ವಿಲೇಜ್ ಈಗಾಗಲೇ ಉದ್ಘಾಟನೆಯಾಗಿದೆ. ತಕ್ಷಣವೇ ಅದು ಕಾರ್ಯಾರಂಭವಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ರಾಜರ ಗದ್ದುಗೆ, ನೆಹರೂ ಮಂಟಪ ನಿರ್ವಹಣೆ, ರಾಜರ ಗದ್ದುಗೆ ಗೇಟಿನ ಬಳಿ ಹೈಮಾಸ್ಕ್ ಲೈಟ್ ಅಳವಡಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳು ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು.
Share Post