Bengaluru

ಬಸ್‌ ಪಾಸ್‌ ಅವಧಿ ವಿಸ್ತರಣೆ:ವಿದ್ಯಾರ್ಥಿಗಳಿಗೆ ಫುಲ್‌ ಖುಷ್‌

ಬೆಂಗಳೂರು: ಬಿಎಂಟಿಸಿ ವಿದ್ಯಾಋತಿಗಳಿಗೆ ಸಿಹಿ ಸುದ್ದಿ ನೀಡಿದ್ದು ಪಾಸ್‌ ಅವಧಿ ವಿಸ್ತರಿಸಿದೆ. ಹೌದು ಬಸ್‌ ಪಾಸ್‌ ವಿತರಿಸುವವರೆಗೆ ಈಗಿರುವ ಪಾಸ್‌ ಅವಧಿಯನ್ನು ವಿಸ್ತರಿಸಿದೆ. ವಿದ್ಯಾರ್ಥಿಗಳು ಈ ಸಾಲಿನ(2021-2022) ಶುಲ್ಕ ರಶೀದಿ ಅಥವಾ ಗುರುತಿನ ಚೀಟಿಯೊಂದಿಗೆ ಉಚಿತವಾಗಿ ಪ್ರಯಾಣಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅನುಮತಿ ನೀಡಿದೆ. ಒಂದರಿಂದ ಹತ್ತನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮೋ, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಪಾಸ್‌ ಅವಧಿಯನ್ನು ವಿಸ್ತರಿಸಿದೆ. ಈ ಬಗ್ಗೆ ನೋಟಿಫಿಕೇಶನ್‌ ಹೊರಡಿಸಿರುವ ಬಿಎಂಟಿಸಿ ಬಸ್‌ ಪಾಸ್‌ಗಾಗಿ ಆನ್ಲೈನ್‌ನಲ್ಲಿ ಅರ್ಜಹಿಗಳು ಬಂದಿವೆ ಈ ತಿಂಗಳು ೧೪ರಿಂದ ಬಸ್‌ ಪಾಸ್‌ ವಿತರಣೆ ಮಾಡಲಾಗುವುದು ಅಲ್ಲಿವರೆಗೂ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಜನವರಿ ೧೫ರ ಒಳಗೆ ಪಾಸ್‌ ಪಡೆದುಕೊಳ್ಳುವಂತೆ ತಿಳಿಸಿದೆ.

 

Share Post