Politics

ಗೃಹಮಂತ್ರಿಗಳು ವಯಸ್ಸಲ್ಲಿ ದೊಡ್ಡವರು, ರಾಜಕೀಯದಲ್ಲಿ ಎಳಸು : ಡಿಕೆಶಿ

ಬೆಂಗಳೂರು : ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದ್ದಾರೆ. ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಅವರು ವಯಸ್ಸಲ್ಲಿ ದೊಡ್ಡವರಿರಬಹುದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು ಎಂದು ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮೇಕೆದಾಟಿನ ಪಾದಯಾತ್ರೆಗೆ ತಯಾರಿಯಲ್ಲಿ ತೊಡಗಿರುವ ಡಿಕೆಶಿ ಇಂದು ಸ್ಯಾಂಕಿ ಕೆರೆಯಲ್ಲಿ ವಾಕಿಂಗ್‌ ಮಾಡಿದರು. ೬ಕಿಮೀ ನಡೆದ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿ ಅರಗ ಜ್ಞಾನೇಂದ್ರ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ. ರೋಡ್‌ನಲ್ಲಿ ನಾನು ನಡೆಯುವುದಕ್ಕೆ ಇವರ ಅನುಮತಿ ಬೇಕಾ? ಹೋಂ ಮಿನಿಸ್ಟರ್ ಅವರು ವಯಸ್ಸಲ್ಲಿ ದೊಡ್ಡವರಿರಬಹದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು. ಹೋರಾಟ ಮಾಡುವುದಕ್ಕೆ ಇವರ ಅನುಮತಿ ಕೇಳಬೇಕಾ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ರಾಜಕೀಯದಲ್ಲಿ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಮೇಕೆದಾಟು ಹೋರಾಟ ನಡೆಸುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ಯಾವ ವೈಯಕ್ತಿಕ ಏನೂ ಇಲ್ಲ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ತಾನೇ ದೇವೇಗೌಡರ ಎದುರು ಅವತ್ತು ಚುನಾವಣೆಗೆ ನಿಲ್ಲಿಸಿದ್ದರು. ಸೋತಿರಬಹುದು, ಆದರೆ ಅಂಥ ಹೋರಾಟಗಾರರ ಮುಂದೆ ನನ್ನ ನಿಲ್ಲಿಸಬೇಕು ಅಂದರೆ ನನ್ನ ಹೋರಾಟದ ಗುಣ ಕೂಡ ಕಾರಣ ಅಲ್ವಾ ಎಂದರು

Share Post