ಬಾರ್ ಗಳಲ್ಲಿ ಈಗಿನಿಂದಲೇ ಜನವೋ….ಜನ
ಬೆಂಗಳೂರು: ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ.ಆದರೆ ಈ ಬಾರಿ ಹೊಸ ವರ್ಷಾಚರಣೆಯನ್ನೆ ಮನೆಯಲ್ಲೇ ಆಚರಿಸಬೇಕಿದೆ. ರಾಜ್ಯದಲ್ಲಿ ಕೊರೋನಾ ಭೀತಿ ಎದುರಾಗಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದೆ. ಮೊನ್ನೆ ಮಂಗಳವಾರದಿಂದ ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಜನರು ಬೆಳಗ್ಗೆ ಮದ್ಯ ಖರಿದೀಸಲು ಬಾರ್ ಅಂಗಡಿಗೆ ಮುಗಿಬಿದ್ದಿದ್ದಾರೆ. ರಾತ್ರಿ ೧೦ ಗಂಟೆಗೆ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಬಂದ್ ಆಗಲಿದೆ. ಈ ಹಿನ್ನೆಲೆ ಮದ್ಯ ಸಿಗುತ್ತೋ ಇಲ್ವೋ ಅಂತಾ ಜನ ಈಗಿನಿಂದಲೇ ಕ್ಯೂ ನಿಂತಿದ್ದಾರೆ.