ಭಾರದಲ್ಲಿ ಓಮಿಕ್ರಾನ್ ಪ್ರಕರಣಗಳು 1270ಕ್ಕೆ ಏರಿಕೆ
ನವದೆಹಲಿ : ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ಹರಡುವಿಕೆ ವೇಗ ಪಡೆದುಕೊಂಡಂತೆ ಕಾಣ್ತಿದೆ. ತಜ್ಞರು ಸಮುದಾಯಕ್ಕೆ ಹಬ್ಬಿರುವ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಓಮಿಕ್ರಾನ್ ಜೊತೆಗೆ ಕೋವಿಡ್ ೧೯ ಸಂಖ್ಯೆಯಲ್ಲಿಯೂ ಭಾರಿ ಏರಿಕೆ ಕಾಣ್ತಿದೆ. ಕಳೆದ ೨೪ ಗಂಟೆಗಳ ಅಂತರದಲ್ಲಿ 16764 ಹೊಸ ಪ್ರಕರಣಗಳು ವರದಿಯಾಗಿದೆ. ಇನ್ನು ಸೋಂಕಿನಿಂದ ೨೨೦ ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಹೊರ ಬಿದ್ದಿದೆ.
ದೇಶದಾದ್ಯಂತ ಕೋವಿಡ್ ಸೋಂಕು ೧೨೭೦ ಕ್ಕೆ ಏರಿಕೆಯಾಗಿದೆ. ಈ ಪೈಕಿ 374 ಮಂದಿ ಗುಣಮುಖರಾಗಿದ್ದಾರೆ. ಕೆಲವು ರಾಜ್ಯಗಳು ಓಮಿಕ್ರಾನ್ ನಿಯಂತ್ರಿಸುವ ಸಲುವಾಗಿ ಈಗಾಗಲೇ ನೈಟ್ ಕರ್ಫ್ಯೂ ಮತ್ತು ಇನ್ನಿತರ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.