ನಾಳೆ ರ್ಯಾಲಿ ಮಾಡಿದರೆ ಬಂಧಿಸುತ್ತೇವೆ- ಡಿಸಿಪಿ ಅನುಚೇತ್
ಬೆಂಗಳೂರು: ಎಂಇಎಸ್ ಪುಂಡಾಟ ಹೆಚ್ಚಾಳವಾಗುತ್ತಿದ್ದರಿಂದ ಈ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆ ಹೋರಾಟಗಾರರ ವಾಟಾಳ್ ನಾಗರಾಜು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಜೊತೆಗೆ ಸಾ.ರಾ ಗೋವಿಂದ್ ಕೂಡ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಮೊನ್ನೆ ತಾನೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಂದ್ ಮಾಡೋದು ಬೇಡ ಎಂದು ಕನ್ನಡಪರ ಸಂಘಟನೆಗೆಳಿಗೆ ಮನವಿ ಮಾಡಿದ್ದಾರೆ. ಆದರೆ ಅದನ್ನು ಲೆಕ್ಕಿಸದೆ ವಾಟಾಳ್ ನಾಗರಾಜು ಬಂದ್ ಗೆ ಎಲ್ಲರೂ ಬೆಂಬಲ ನೀಡಬೇಕು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆ ನಗರದಲ್ಲಿ ಡಿಸಿಪಿ ಅನುಚೇತ್ ಪ್ರತಿಕ್ರಿಯೆ ನೀಡಿದ್ದಾರೆ, ಯಾರು ಬಲವಂತದಿಂದ ಬಂದ್ ಮಾಡಬಾರದು. ಜೊತೆಗೆ ರ್ಯಾಲಿ ಮಾಡಲು ಬಂದರೆ ಬಂಧಿಸುತ್ತೇವೆ ಎಂದರು. ರ್ಯಾಲಿ ಮಾಡುವ ಹಾಗಿಲ್ಲ. ಒಂದು ವೇಳೆ ಮಾಡಿದರೆ ಕೂಡಲೇ ಟೌನ್ ಹಾಲ್ ಬಳಿ ಬಂಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಹೊಸ ವರ್ಷ ಆಚರಿಸಲು ಯಾವುದೆ ರೀತಿಯ ಕಾರ್ಯಕ್ರಮ ಡಿಜೆ ಇತ್ಯಾದಿ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ. ಯಾವುದಾದರು ಕಾರ್ಯಕ್ರಮ ಆಯೋಜಿಸಿದರ ಬಗ್ಗೆ ತಿಳಿದು ಬಂದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಅಂತವರ ವಿರುದ್ಧ ಕೇಸ್ ದಾಖಲಿಸಲಾಗುತ್ತೆದೆ ಎಂದರು.
ಅಂದಹಾಗೆ ಸರ್ಕಾರ ಆದೇಶದಂತೆ ಬಾರ್, ರೆಸ್ಟೋರೆಂಟ್ ಗಳಲ್ಲಿ ಊಟ,ತಿಂಡಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ನೈಟ್ ಕರ್ಫ್ಯೂ ಹೊತ್ತಿಗೆ ಎಲ್ಲವೂ ಬಂದ್ ಆಗಬೇಕು. ನಾಳೆ ಸ್ವಲ್ಪ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.