Cinema

ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌ಗೆ ಏಟಿನಿಂದ ಬುದ್ದಿ ಹೇಳಿದ ಮಂಗ್ಲಿ

ಒಂಗೋಲ್:‌ ಪ್ರತಿಯೊಬ್ಬ ಸೆಲಬ್ರೆಟಿಗೂ ಫ್ಯಾನ್ಸ್‌ ಇದ್ದೇ ಇರ್ತಾರೆ. ನೆಚ್ಚಿನ ಹೀರೋ ಹೀರೋಯಿನ್‌ ಆಥವಾ ಗಾಯಕರು ಯಾರೇ ಇರಲಿ ಯಾವುದೋ ಕಾರ್ಯಕ್ರಮ ಮತ್ತಿನೆಲ್ಲೋ ಕಂಡಾಗ ಅಭಿಮಾನಿಗಳು ಒಂದು ಫೋಟೊ ಕೇಳೋದು ಕಾಮನ್.‌ ಅದರಲ್ಲಿ ಅವರಿಗೇನೋ ಖುಷಿ. ನನ್ನ ನೆಚ್ಚಿನ ಹೀರೋ ಹೀರೋಯಿನ್‌ ಜೊತೆ ಫೊಟೋ ತೆಗೆದೊಕೊಂಡೆ ಎಂಬ ಸಂತೋಷ ಇರುತ್ತದೆ.

ಆದ್ರೆ ನಮ್ಮ ಸಂತೋಷ ಅವರಿಗೆ ಕಿರಿಕಿರಿ ಉಂಟಾಗದಂತೆ ಇರಬೇಕು. ಅದೆಷ್ಟೊ ಸಿನಿಮಾ ಕಾರ್ಯಕ್ರಮಗಳಲ್ಲಿ ಅಭಿಮಾನಿಗಳ ಕಿರಿಕಿರಿ ತಾಳಲಾರದೆ ನಾಯಕ-ನಾಯಕಿಯರು ಮುಜುಗರಕ್ಕೀಡಾಗಿ ಕಿರುಚಾಡಿರುವ ಸಂಘಟನೆಗಳು ನಡೆದಿವೆ. ಅಂಥದ್ದೇ ಘಟನೆ ಗಾಯಕಿ ಮಂಗ್ಲಿಯವರು ಎದುರಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಭಾಷೆಗಳಲ್ಲೂ ತಮ್ಮ ಕಂಚಿನ ಕಂಠದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.

ಕನ್ನಡದಲ್ಲೂ ಕೂಡ ರಾಬರ್ಟ್‌ ಸಿನಿಮಾದ ಹಾಡಿನಿಂದ ಬಹಳ ಫೇಮಸ್ ‌ಆಗಿದ್ದಾರೆ. ಯಾವುದೇ ಕಾರ್ಯಕ್ರಮವಾದರೂ ಅಲ್ಲಿ ಸಂಗೀತದ ಘಮಲು ರುಚಿಕರವಾಗಿರುತ್ತದೆ. ಹಾಗಾಗಿ ವಿಶೇಷ ಸಂದರ್ಭಗಳಲ್ಲಿ ಫೇಮಸ್‌ ಸಂಗೀತಗಾರರನ್ನು ಕೆರಸಿ ಹಾಡಿಸುವುದುಂಟು. ಹಾಗೆಯೇ ಮಂಗ್ಲಿ ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಲೆ ಅಭಿಮಾನಿಗಳು ಸೆಲ್ಫಿಗಾಗಿ ಅವರ ಬಳಿ ಹೋಗಿದ್ದಾರೆ. ಆದ್ರೆ ಸೆಲ್ಫಿ ಸಮಯದಲ್ಲಿ ತುಂಬಾ ಅಸಭ್ಯವಾಗಿ ನಡೆದುಕೊಂಡ ಕಾರಣ ಮಂಗ್ಲಿ ಸಿಟ್ಟಾಗಿ ಅವರಿಗೆ ಕೈಯಿಂದ ಬುದ್ದಿ ಹೇಳಿದ್ದಾರೆ. ಕೂಡಲೇ ಡ್ರೈವರ್‌ಗೆ ಕರೆ ಮಾಡಿ ಕಾರು ತರುವಂತೆ ತನ್ನ ಅಸಿಸ್ಟೆಂಟ್‌ಗೆ ಬೈದಿದ್ದಾರೆ. ನೆಚ್ಚಿನ ಸೆಲೆಬ್ರೆಟಿಗಳಿಗೆ ಅವಮಾನ, ಕಿರಿಕಿರಿಯಾಗದಂತೆ ನಡೆದುಕೊಳ್ಳಬೇಕು.

Share Post