National

ಭಾರತದಲ್ಲಿ 781ಕ್ಕೆ ಏರಿದ ಓಮಿಕ್ರಾನ್ ಪ್ರಕರಣಗಳು

ನವದೆಹಲಿ : ಕೊರೊನಾ ರೂಪಾಂತರಿ ಓಮಿಕ್ರಾನ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ ಭಾರತದಲ್ಲಿ 781 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಓಮಿಕ್ರಾನ್‌ ಪ್ರಕರಣಗಳಲ್ಲಿ ದೆಹಲಿ (238) ಅಗ್ರಸ್ಥಾನದಲ್ಲಿದೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (167) ಇದೆ. ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಶೇ ೯೮.೪೦ಕ್ಕೆ ಏರಿದೆ. ಕಳೆದ ಮಾರ್ಚ್‌ ೨೦೨೦ರಿಂದ ಇದು ಅತ್ಯಂತ ದಾಖಲೆಯ ಚೇತರಿಕೆ ಆಗಿದೆ.

ಓಮಿಕ್ರಾನ್‌ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ. ಹಲವು ರಾಷ್ಟ್ರಗಳಲ್ಲಿ ತ್ವರಿತ ಗತಿಯಲ್ಲಿ ಇದು ಹರಡುತ್ತಿದ್ದುಆದಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸಲು ಮುಂದಾಗಿವೆ.

Share Post