ಬಿಜೆಪಿ ಜೊತೆ ಅಮರಿಂದರ್ ಸಿಂಗ್ ಮೈತ್ರಿ : ಅಧಿಕೃತ ಘೋಷಣೆ
ನವದೆಹಲಿ : ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ಈ ವಿಷಯವನ್ನು ಸ್ವತಃ ಅಮರಿಂದರ್ ಸಿಂಗ್ ಅವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರ ಬಿಜೆಪಿಯ ಮುಖ್ಯಸ್ಥರಾದ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ ಜೊತೆಗಿನ ಭಿನ್ನಮತದ ಬಳಿಕ ಪಕ್ಷ ತೊರೆದಿದ್ದ ಅಮರಿಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪಿಸಿದ್ದರು. ಟ್ವೀಟ್ನಲ್ಲಿ ಮೈತ್ರಿ ಕುರಿತು ಮಾತನಾಡಿದ್ದೇವೆ. ಪಂಜಾಬ್ನಲ್ಲಿ ಸ್ಥಿರ ಸರ್ಕಾರ ನೀಡವು ಗುರಿ ಹೊಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ.
Met with Union HM @AmitShah, @BJP4India President @JPNadda, Punjab Incharge @gssjodhpur & Shiromani Akali Dal (Sanyukt) President Sukhdev Dhindsa to discuss details of the alliance for the upcoming assembly elections. Look forward to working together to give Punjab a stable govt. pic.twitter.com/Wfvod6CTDo
— Capt.Amarinder Singh (@capt_amarinder) December 27, 2021