ಕನ್ನಡ ಭಾಷೆಯನ್ನು ಉಳಿಸೋದು ಸರ್ಕಾರದ ಕರ್ತವ್ಯ-ಹೆಚ್‌ಡಿಕೆ
ಬಿಡದಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಕೇತಿಗಾನಹಳ್ಳಿಯಲ್ಲಿ ಬಿಡದಿ ಪುರಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ರು. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ೨೩/೨೦ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ.
ಹಿಂದಿ ಹೇರಿಕೆ ಟ್ವೀಟ್ ಬಗ್ಗೆ ಮಾತನಾಡುತ್ತಾ ಕನ್ನಡದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವದಿಂದ ಹೀಗಾಗ್ತಿದೆ. ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸುವ ಹುನ್ನಾರ ನಡೆತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಕನ್ನಡ ಜನತೆ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು. ಪದೇ ಪದೇ ಕನ್ನಡಿಗರು, ಕನ್ನಡ ಭಾಷೆ ಮೇಲೆ ಅವಮಾನ ಮಾಡುವ ಕೆಲಸ ನಡೀತಿದೆ. ಯುವಕರು ಉದ್ಯೋಗಗಳಿಂದ ವಂಚಿತರಾಗಲು ಪಿತೂರಿ ಮಾಡ್ತಿದಾರೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಯಾರ್ಯಾರೋ ಎಲ್ಲಿಂದಲೋ ಬಂದು ಇಲ್ಲಿ ಕೆಲಸ ಮಾಡ್ತಿದಾರೆ. ನಮ್ಮ ಕನ್ನಡಿಗರಿಗೆ ಮೊದಲು ಆದ್ಯತೆ ನೀಡುವ ಕೆಲಸ ಮೊದಲು ಆಗಬೇಕು ಎಂದ್ರು.