CrimeNational

ಸರಣಿ ರಸ್ತೆ ಅಪಘಾತ: ಐವರು ಸಾವು, ೧೦ಮಂದಿಗೆ ಗಾಯ

ಅಂಬಾಲಾ: ಮೂರು ಖಾಸಗಿ ಬಸ್‌ಗಳು ಸರಣಿ ಅಪಘಾತವಾಗಿ ಮಹಿಳೆ ಸೇರಿದಂತೆ ಐವರು ಸಾವಿಗೀಡಾದ ಘಟನೆ ಅಂಬಾಲಾ-ಚಂಡೀಗಢ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ೧೦ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಜಮ್ಮುವಿನಿಂದ ಉತ್ತರ ಪ್ರದೇಶ ಮತ್ತು ದೆಹಲಿಗೆ ಹೋಗುವ ಮಾರ್ಗದಲ್ಲಿ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲದಿಂದ ಕಾರ್ಮಿಕರು ಮತ್ತು ಭಕ್ತರನ್ನು ಕರೆದೊಯ್ಯುತ್ತಿದ್ದವು. ಈ ವೇಳೆ ಎಕ್ಸ್‌ಪ್ರೆಸ್‌ವೇಯಲ್ಲಿ ನಿಂತಿದ್ದ ಬಸ್‌ಗೆ ಇನ್ನೊಂದು ಬಸ್‌ ಡಿಕ್ಕಿ ಹೊಡೆದಿದೆ. ಹಿಂದಿನಿಂದ ಬಂದ ಮೂರನೇ ಬಸ್ ಈಗಾಗಲೇ ಅಪಘಾತಕ್ಕೀಡಾದ ಎರಡು ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ. ಸುಲ್ತಾನ್‌ಪುರ ಚೌಕ್‌ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಹೀಲಿಂಗ್ ಟಚ್ ಆಸ್ಪತ್ರೆ ಬಳಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ನಿಲ್ಲಿಸಿದ್ದ ಬಸ್‌ ಚಾಲಕ ನಿದ್ರೆಗೆ ಜಾರಿದ್ದರಿಂದ ಈ ದುರಂತ ನಡೆದಿದೆ ಎಂದು ಎಎಸ್‌ಐ ನರೇಶ್‌ ತಿಳಿಸಿದ್ದಾರೆ.

ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆ ಮತ್ತು ಹೀಲಿಂಗ್ ಟಚ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಚಾರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರವಣ್ ತಿಳಿಸಿದ್ದಾರೆ. ಬಲದೇವ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post