ದೆಹಲಿಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ
ದೆಹಲಿ: ಒಮಿಕ್ರಾನ್ ಹೆಚ್ಚಳದಿಂದಾಗಿ ಇಂದಿನಿಂದ ದೆಹಲಿಯಲ್ಲಿ ರಾತ್ರಿ ೧೧ ಗಂಟೆಯಿಂದ ಬೆಳಗ್ಗೆ ೫ರ ವರೆಗೆ ನೈಟ್ ಕರ್ಫ್ಯೂ ವಿಧಿಸಿದ್ದಾರೆ. ದೆಹಲಿಯ ಡಿಡಿಎಂಎ ಆದೇಶಿಸಿದೆ.
ದೆಹಲಿಯಲ್ಲಿ ೧೪೨ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿಡಿಎಂಎ ನಿಂದ ಮುಂದಿನ ಆದೇಶದವರೆಗೂ ರಾತ್ರಿ ನಿರ್ಬಂಧ ಹೇರಲಾಗಿದೆ. ಆಸ್ಪತ್ರಗೆ ತೆರಳುವವರು, ನೈಟ್ ಪ್ರಯಾಣಿಕರಿಗೆ , ಮಾಧ್ಯಮದವರಿಗೆ ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆ.
ಮೆಟ್ರೋ ರೈಲು ಮತ್ತು ಬಸ್ ಗಳಲ್ಲಿ ಆಸನ ಭರ್ತಿ ಅರ್ಧದಷ್ಟು ಜನರಿಗೆ ಅವಕಾಶ ನೀಡಿದೆ. ಅನಿವಾರ್ಯವಲ್ಲದ ಅಂಗಡಿಗಳು ಮತ್ತು ಮಾಲ್‌ಗಳನ್ನು ಮುಚ್ಚುವುದು ಸೇರಿದಂತೆ ಇತರೆ ಕ್ರಮಗಳನ್ನು ಯೆಲ್ಲೋ ಅಲರ್ಟ್ ನಲ್ಲಿ ಕೈಗೊಳ್ಳಲಾಗುತ್ತದೆ.