BengaluruDistricts

ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ

ಬೆಂಗಳೂರು: ೫೮ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ೫೭ ಗ್ರಾಮ ಪಂಚಾಯಿತಿಗಳ ಸದಸ್ಯರ ಸ್ಥಾನಕ್ಕೆ ಇಂದು ಮತದಾನ ಬಿರುಸಿನಿಂದ ನಡೆಯುತ್ತಿದೆ. ಹಲವು ಕಾರಣಗಳಿಂದ ತೆರವಾಗಿದ್ದ ಎಂಟು ಸ್ಥಾನಗಳು ಮತ್ತು ಕೆಲ ಗ್ರಾಮ ಪಂಚಾಯಿತಿಗಳ ೩೮೬ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆಯುತ್ತಿದ್ದು, ಎಲ್ಲ ಕಡೆ ಶಾಂತಿಯತ ಮತದಾನ ನಡೆಯುತ್ತಿದೆ.
ಇನ್ನು ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ ಜಿಲ್ಲೆಯ ಬೆಟಗೇರಿ , ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರಸಭೆಗಳು ಸೇರಿದಂತೆ ವಿವಿಧ ಜಿಲ್ಲೆಗಳ ೧೯ ಪುರಸಭೆಗಳು ಮತ್ತು ೩೪ ಪಟ್ಟ‍ಣ ಪಂಚಾಯಿತಿಗಳಿಗೆ ಚುನಾವಣೆ ಮತದಾನ ನಡೆಯುತ್ತಿದೆ. ಉಪಚುನಾವಣೆ ನಡೆಯುತ್ತಿರುವ ಎಂಟು ಕ್ಷೇತ್ರಗಳಲ್ಲಿ ೩೭ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ಬೆಳಗ್ಗೆ ಶುರುವಾದ ಮತ ಚಲಾವಣೆ ೫ರವರೆಗೂ ನಡೆಯಲಿದೆ. ಡಿಸೆಂಬರ್‌ ೩೦ರ ಗುರುವಾರದಂದು ನಡೆದಿದ್ದ ಚುನಾವಣೆ ಮತ ಎಣಿಕೆ ನಡೆಯಲಿದೆ.
ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ ರವಿ ಅವರು ಮತ ಚಲಾಯಿಸಿದರು. ಜೊತೆಗೆ ಗುಮ್ಮಟ ನಗರಿ ವಿಜಯಪುರದಲ್ಲಿ ಆರು ಪಟ್ಟಣ ಪಂಚಾಯಿತಿಗಳ ಮತದಾನ ನಡೆಯುತ್ತಿದೆ. ನಗರದಲ್ಲಿ ಬೆಳಗ್ಗೆಯಿಂದಲೂ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದಾರೆ.
ಬೆಳಗಾವಿಯಲ್ಲೂ ಸಹ ಶಾಂತಿಯುತ ಮತದಾನ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Share Post