ಅಬ್ದುಲ್ ಲತೀಫ್ ನಜಾರಿಗೆ ಹಣಕಾಸು ಇಲಾಖೆ ಜವಾಬ್ದಾರಿ
ಕಾಬೂಲ್: ಅಪ್ಘಾನಿಸ್ತಾನ ಹಣಕಾಸು ಇಲಾಖೆಯ ಉಪ ಸಚಿವರನ್ನಾಗಿ ಅಬ್ದುಲ್ ಲತೀಫ್ ನಜಾರಿ ಅವರನ್ನು ತಾಲಿಬಾನ್ ಸರ್ಕಾರ ನೇಮಕ ಮಾಡಿದೆ. ಈ ಬಗ್ಗೆ ಅಲ್ಲಿನ ಸುದ್ದಿ ಸಂಸ್ತೆಯೊಂದು ವರದಿ ಮಾಡಿದ್ದು. ನಜಾರಿಯವರು ಪಿಎಚ್ಡಿ ಮಾಡಿ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಲ್ಲೇಖಿಸಿದೆ.
ನಜಾರಿ ಅವರನ್ನು ಹಣಕಾಸು ಇಲಾಖೆಯ ಉಪಸಚಿವರನ್ನಾಗಿ ನೇಮಕ ಮಾಡಿ ಎಂದು ತಾಲಿಬಾನ್ ವಕ್ತಾರ ಹಾಗೂ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಉಪ ಸಚಿವ ಜಬೀವುಲ್ಲಾ ಮುಜಾಹಿದ್ ಆದೇಶಿಸಿದ್ದಾರೆ. ತಾಲಿಬಾನ್ನ ಪರಮೋಚ್ಚ ನಾಯಕ ಹಯಬತ್ ಉಲ್ಲಾ ಅಖುನ್ ಜಾದಾ ಅವರ ಆದೇಶದಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.