ಡಿಸೆಂಬರ್ 31 ಬಂದ್| ವಾಣಿಜ್ಯ ಮಂಡಳಿ ತೀರ್ಮಾನಕ್ಕೆ ನಾವು ಬದ್ಧ – ಶಿವರಾಜ್ ಕುಮಾರ್
ಮೈಸೂರು : ನಟ ಡಾಲಿ ಧನಂಜಯ್ ಆವರ ಸಿನಿಮಾ ವೀಕ್ಷಣೆಗೆ ಡಿ.ಆರ್.ಸಿಗೆ ಬಂದಿದ್ದ ಶಿವಣ್ಣ ಮಾಧ್ಯಮದವರ ಜೊತೆ ಬಂದ್ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ ೩೧ ರಂದು ನಡೆಯುವ ಬಂದ್ ದಿನ ೩ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.
ನಾಡು ನುಡಿ ವಿಚಾರಕ್ಕೆ ಬಂದರೆ ಎಲ್ಲರಿಗೂ ಅಭಿಮಾನ ಇದ್ದೇ ಇರುತ್ತೆ. ಸರ್ಕಾರ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಸಿದೆ. ನಮ್ಮಿಂದಲೇ ದ್ರೋಹವಾಗುವ ಸನ್ನಿವೇಷ ಎದುರಾಗಬಾರದು ಎಂದು ಶಿವಣ್ಣ ಮಾತನಾಡಿದ್ದಾರೆ.
ಇನ್ನು ಡಾಲಿ ಅಭಿನಯದ ಬಡವ ರಾಸ್ಕಲ್ ಸಿನಿಮಾ ಸರಳ ಕಥೆ ಹೊಂದಿದೆ, ಬಟ್ ಮನರಂಜನಾತ್ಮಕವಾಗಿ ಹೇಳಿದ್ದಾರೆ. ಚೆನ್ನಾಗಿದೆ ಎಂದು ಅಭಿಪ್ರಾಯಿಸಿದರು