ಓಮಿಕ್ರಾನ್ ಆತಂಕಕ್ಕೆ ರಾಜ್ಯದಲ್ಲಿ ಟಫ್ ರೂಲ್ಸ್: ನಾಳೆ ಸಿಎಂ ಸಭೆ
ಹುಬ್ಬಳ್ಳಿ: ದಿನೇ ದಿನೇ ಓಮಿಕ್ರಾನ್ ವೈರಸ್ ಹೆಚ್ಚಾಗ್ತಿದೆ. ನೆರೆ ರಾಜ್ಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನರಿಗೆ ವೈರಸ್ ಹರಡಿದೆ. ಈ ಬಗ್ಗೆ ರಾಜ್ಯದಲ್ಲಿ ಕೂಡ ಟಫ್ ರೂಲ್ಸ್ ಜಾರಿಯಾಗಲಿವೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬಳ್ಳಾರಿಯಲ್ಲಿ ಮಾತನಾಡಿ, ನಮಗೆ ಮಹಾರಾಷ್ಟ್ರ, ಕೇರಳ ರಾಜ್ಯದ್ದೇ ಆತಂಕವಾಗಿದೆ. ಅಲ್ಲಿ ವೈರಸ್ ಹೆಚ್ಚಾಗಿದೆ. ಈ ಬಗ್ಗೆ ನಾಳೆ ತಜ್ಞರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಹೊಸ ವರ್ಷದ ಸೆಲೆಬ್ರೇಷನ್‌ಗೆ ಯಾವ್ಯಾವ ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂಬುದನ್ನು ನಾಳೆ ಗೊತ್ತಾಗಲಿದೆ. ಮೂರು ದಿನಗಳ ಕಾಲ ನೈಟ್ ಕರ್ಪ್ಯೂ ಹೇರಿದ್ರೂ ಅಚ್ಚರಿ ಇಲ್ಲ ಎಂಬ ಮಾಹಿತಿ ಹರಿದಾಡ್ತಿದೆ. ಹೆಚ್ಚಾಗಿ ಜನ ಸೇರುವ ಜಾಗದಲ್ಲಿ ಅತೀ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲೇಕಾಗಿದೆ.