ಉತ್ತರಪ್ರದೇಶದಲ್ಲೂ ನೈಟ್ ಕರ್ಫ್ಯೂ ಜಾರಿ
ಲಖನೌ : ಓಮಿಕ್ರಾನ್ ಸೋಂಕು ನಿಧಾನವಾಗಿ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಜರುಗಿಸಲು ಮುಂದಾಗಿವೆ. ಮಧ್ಯಪ್ರದೇಶದ ನಂತರ ಈಗ ಉತ್ತರಪ್ರದೇಶದಲ್ಲೂ ನೈಟ್ ಕರ್ಫ್ಯೂ ಜಾರಿಯಾಗಿದೆ.
ಡಿಸೆಂಬರ್ ೨೫ರಿಂದ ಜಾರಿಯಾಗಲಿದೆ ನೈಟ್ ಕರ್ಫ್ಯೂ. ರಾತ್ರಿ ೧೧ ಗಂಟೆ ಇಂದ ಬೆಳಗ್ಗೆ ೫ ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಮದುವೆಗಳಿಗೂ ೨೦೦ ಜನರ ಮೇಲೆ ಸೇರದಂತೆ ಸರ್ಕಾರ ನಿಷೇಧ ಹೇರಿದೆ. ಉತ್ತರ ಪ್ರದೇಶದಲ್ಲಿ ಈವರೆಗೂ ೨ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಇಂದು ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
UP Govt: Night curfew to be put in place from December 25 from 11 pm-5am . Not more than 200 people allowed in weddings pic.twitter.com/bHs8Ih7urW
— ANI UP/Uttarakhand (@ANINewsUP) December 24, 2021