Health

ದೇಶದಲ್ಲಿ ಒಮಿಕ್ರಾನ್‌ ಪ್ರಕರಣ ಹೆಚ್ಚಳ ಹಿನ್ನೆಲೆ; ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ನವದೆಹಲಿ: ದೇಶದಲ್ಲಿ ಮತ್ತೆ ಕೊವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಒಮಿಕ್ರಾನ್‌ ಕೇಸ್‌ಗಳು ಕೂಡಾ ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಕೊವಿಡ್‌ ಹಾಗೂ ಒಮಿಕ್ರಾನ್‌ ತಡೆಗಾಗಿ ಚರ್ಚೆಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಅಧಿಕಾರಿ ಸಭೆಯನ್ನು ಇಂದು ಸಂಜೆ 6.30ಕ್ಕೆ ಕರೆದಿದ್ದಾರೆ. ಸಭೆಯಲ್ಲಿ ಓಮಿಕ್ರಾನ್ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಅಧಿಕಾರಿಗಳೊಂದಿಂಗೆ ಚರ್ಚೆ ನಡೆಸಲಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೆ ದೇಶದಲ್ಲಿ 213 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ದೆಹಲಿ (57) ಹಾಗೂ ಮಹಾರಾಷ್ಟ್ರ (54) ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿವೆ. ತೆಲಂಗಾಣ 24, ಕರ್ನಾಟಕ 19, ರಾಜಸ್ತಾನ 18, ಕೇರಳ 15 ಹಾಗೂ ಗುಜರಾತ್‌ನಲ್ಲಿ 14 ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿವೆ. ಒಟ್ಟಾರೆ ದೇಶದ 15 ರಾಜ್ಯಗಳು ಒಮಿಕ್ರಾನ್ ವರದಿ ಮಾಡಿವೆ. ಇನ್ನೊಂದೆಡೆ ಕೊರೊನಾ ಪ್ರಕರಣಗಳೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಮಂಗಳವಾರ ದೇಶದಲ್ಲಿ 6,317 ಪ್ರಕರಣಗಳು ವರದಿಯಾಗಿದ್ದು, ಇನ್ನೂ 78,190 ಪ್ರಕರಣಗಳು ಸಕ್ರಿಯವಾಗಿವೆ.

Share Post