ಮೊಡವೆಯಿಂದ ಮುಕ್ತಿ ಸಿಗೋದ್ ಹೇಗೆ?
ಹದೆಹರೆಯದ ವಯಸ್ಸಿನ ಹುಡುಗ- ಹುಡುಗಿಯರಿಗೆ ಮೊಡವೆ ಆಗುವುದು ಸಹಜ. ಆದ್ದರಿಂದ ಮುಖ ಕಾಂತಿಯೇ ಹಾಳಾಗುತ್ತದೆ.ನಿಮ್ಮ ಹದಗೆಟ್ಟ ಊಟೋಪಚಾರ, ಶರೀರದಲ್ಲಿ ಯಾವುದೋ ಒಂದು ಪೋಷಕಾಂಶದ ಕೊರತೆ, ಧೂಳು, ಮಣ್ಣು ಇತ್ಯಾದಿ ಕಾರಣಗಳಿಂದಲೂ ಮುಖದ ಮೇಲೆ ಮೊಡವೆಗಳು ಏಳಬಹುದು. ಹೀಗಾಗಿ ಅದನ್ನು ಹೊಲಾಡಿಸಲು ಆಸ್ಪತ್ರೆಗೆ ಹೋಗುತ್ತಾರೆ.ಮೊಡವೆಗಳ ಸಮಸ್ಯೆ ನಿವಾರಿಸಲು ಕೆಲವೊಂದು ಮನೆ ಮದ್ದುಗಳಿವೆ.
ಜೇನು:
ಜೇನಿನಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣ ಇರುತ್ತದೆ. ಇದು ಮೊಡವೆಗಳ ವಿರುದ್ಧ ಕೆಲಸ ಮಾಡುತ್ತವೆ. ನಿತ್ಯವೂ ಜೇನು ತಿಂದರೆ ಅಥವಾ ಜೇನನ್ನು ಮುಖದ ಮೇಲೆ ಲೇಪಿಸಿಕೊಂಡರೆ ಮೊಡವೆಯ ಸಮಸ್ಯೆಯಿಂದ ಪಾರಾಗಬಹುದು.
ಗ್ರೀನ್ ಟೀ
ಗ್ರೀನ್ ಟೀಯಿಂದ ಶರೀರಕ್ಕೆ ಹಲವು ಲಾಭ ಇದೆ. ಬೊಜ್ಜು ಕರಗಿಸಲು ಗ್ರೀನ್ ಟೀ ಬಹಳ ಉಪಯೋಗ. ಗ್ರೀನ್ ಟೀಯಲ್ಲಿ ಆಂಟಿ ಇನಫ್ಲಮೇಟರಿ ಗುಣ ಇದೆ. ಇದು ನೋವು ಕಡಿಮೆ ಮಾಡುತ್ತದೆ. ಗ್ರೀನ್ ಟಿ ಕುಡಿದರೆ ಪಿಂಪಲ್ಸ್ ಸಮಸ್ಯೆ ಕಡಿಮೆಯಾಗುತ್ತದೆ.
ಅಲೋವೇರಾ
ಔಷಧೀಯ ಗುಣಗಳಿಂದ ಸಮೃದ್ಧವಾಗಿರು ಗಿಡ ಅಲೋವೇರಾ . ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಅತೀಮುಖ್ಯ ಅಲೋವೇರಾ. ಅಲೋವೇರಾ ಜ್ಯೂಸ್ ಕುಡಿದರೆ ದೇಹದಲ್ಲಿ ರುವ ವಿಷಯುಕ್ತ ವಸ್ತುಗಳು ದೇಹದಿಂದ ಹೊರಕ್ಕೆ ಹೋಗುತ್ತವೆ. ಅಲೋವೇರಾ ಕುಡಿದರೆ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.