ಮಗಳ ಸಂತೋಷಕ್ಕೆ ತಂದೆ ಮಾಡಿದ ಆ ಕೆಲಸ..ಅಬ್ಬಬ್ಬಾ..!
ಮಧ್ಯಪ್ರದೇಶ: ಅಪ್ಪ ಅಂದ್ರೆ ಆಕಾಶ ಅಂತ ಸುಮ್ನೆ ಹೇಳಲ್ಲ, ಅಮ್ಮ ಒಂಭತ್ತು ತಿಂಗಳು ಹುತ್ತು ಹೆತ್ತರೆ, ಅಪಪ್ ಜೀವನ ಪೂರ್ತಿ ಮಗಳನ್ನು ಭುಜದ ಮೇಲಿಸಿಕೊಂಡು ಸಾಕುತ್ತಾನೆ. ಅವನ ಪ್ರೀತಿಗೆ ಪಾರವೇ ಇಲ್ಲ, ಮಗಳ ಸಂತೋಷಕ್ಕಿಂತ ಬೇರೆ ಪ್ರಪಂಚ ಯಾವ ತಂದೆಗೂ ಇರಲ್ಲ. ಮಗಳು ಕೇಳಿದ ಉಡುಗೊರೆಗಳನ್ನು ಕೊಡಿಸೋಕೆ ತನ್ನ ಶಕ್ತಿ ಮೀರಿ ಪ್ರಯತ್ನ ಪಡುವವನು ಅಂದ್ರೆ ಅಪ್ಪ ಮಾತ್ರ. ಅದಕ್ಕೆ ಅವನನ್ನು ದೇವರ ಸ್ಥಾನದಲ್ಲಿ ಕೂರಿಸುತ್ತಾರೆ. ಇಂಥದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಐದು ವರ್ಷದ ಮುದ್ದು ಮಗಳ ಖುಷಿಗಾಗಿ ಆ ತಂದೆ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ. ನೋಡಿದವರಿಗೆ ಹುಚ್ಚುತನ ಅನ್ಸಿದ್ರು ಆ ಮಗಳ ತುಟಿಯಲ್ಲಿ ನಗುವನ್ನು ನೋಡೋದು ಹೆತ್ತವನ ಕನಸು. ಟೀ ಮಾರಿಕೊಂಡೇ ಕುಟುಂಬದ ಜವಾಬ್ದಾರಿ ಹೊತ್ತ ಈತ ತನ್ನ ಐದು ವರ್ಷದ ಮಗಳು ಮೊಬೈಲ್ ಕೇಳಿದಳು ಎಂಬ ಕಾರಣಕ್ಕೆ, ಮೊಬೈಲ್ ಅಂಗಡಿಗೆ ಮಗಳ ಜೊತೆ ಹೋಗಿದ್ದಾನೆ. ಸೆಲ್ ಫೋನ್ ಕೊಂಡು ಒಂದು ಕುದುರೆ ಟಾಂಗಾ ಕರೆಸಿ, ಅದಕ್ಕೆ ಸೀರಿಯಲ್ ಸೆಟ್ ಅಲಂಕಾರ ಮಾಡಿಸಿ, ಬ್ಯಾಂಡ್‌ಸೆಟ್ ಅವರನ್ನು ಕರೆಸಿ, ಅಂಗಡಿಯಿಂದ ಮನೆವರೆಗೂ ಬಾಜಾ ಬಜಂತ್ರಿಗಳ ಮೂಲಕ ಮೆರವಣಿಗೆ ಬಂದಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆತ್ತಪ್ಪನ ಬೆಲೆ ಕಟ್ಟಲಾರದ ಪ್ರೀತಿಗೆ ನೆಟ್ಟಿಗರು ಫುಲ್ ಫಿದಾ ಆಗಿ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.