Lifestyle

ಸುಲಭವಾಗಿ ತಯಾರು ಮಾಡಿ ಬದನೆಕಾಯಿ ಚಟ್ನಿ

ಬದನೆಕಾಯಿ ಇದ್ದರೆ ಸಾಕು ರುಚಿ ರುಚಿಯಾಗಿ ಅಡುಗೆ ತಯಾರು ಮಾಡಬಹುದು. ಕೆಲವರಿಗೆ ಬದನೆಕಾಯಿ ಅಂದರೆ ಆಗುವುದಿಲ್ಲ. ಅಂಥವರಿಗೆ ಖಾರವಾಗಿ ಬದನೆಕಾಯಿ ಚಟ್ನಿ ಮಾಡಿ. ಈ ಚಟ್ನಿ ಅಕ್ಕಿ ರೊಟ್ಟಿ, ಕಡುಬಿಗೆ ತುಂಬಾ ಒಳ್ಳೆಯ ಕಾಂಬಿನೇಷನ್ ನೀಡುತ್ತದೆ. ಬದನೆಕಾಯಿ ಚಟ್ನಿ ಮಾಡುವ ವಿಧಾನ ಕೂಡ ತುಂಬಾ ಸುಲಭವಾಗಿದೆ.
ಬೇಕಾಗುವ ಸಾಮಾಗ್ರಿಗಳು
ಎರಡು ಬದನೆಕಾಯಿ
ಹಸಿಮೆಣಸಿನಕಾಯಿ
ಈರುಳ್ಳಿ
ಮೊಸರು
ಉಪ್ಪು
ಬೆಳ್ಳುಳ್ಳಿ
ಹುಣಸೆ ಹುಳಿ
ಶುಂಠಿ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಖಾರವಾದ 4ರಿಂದ 5 ಹಸಿಮೆಣಸಿನಕಾಯಿ, ಕತ್ತರಿಸಿಕೊಂಡ ಸಣ್ಣ ಗಾತ್ರದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದು ಚಮಚ ಎಣ್ಣೆಯೊಂದಿಗೆ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಿ. ಬದನೆಕಾಯಿಯನ್ನು ಕಟ್ಟಿಗೆ ಒಲೆಯ ಕೆಂಡದಲ್ಲಿ 10ರಿಂದ 15 ನಿಮಿಷಗಳ ಕಾಲ ಸುಡಬೇಕು. ಕಟ್ಟಿಗೆ ಒಲೆ ಇಲ್ಲದವರು ಗ್ಯಾಸ್ ಮೇಲೆ ಇಟ್ಟು ಸುಡಬಹುದು. ಒಲೆಯಲ್ಲಿ ಸುಟ್ಟರೆ ರುಚಿ ಹೆಚ್ಚಾಗಿರುತ್ತದೆ.
ಬದನೆಕಾಯಿ ಬೆಂದ ನಂತರ ಅದನ್ನು ಹೊರಗೆ ತೆಗೆದು ನೀರಿನಲ್ಲಿ ಹಾಕಿ. ಬಿಸಿ ತಣ್ಣಗಾದ ಬಳಿಕ ಮೇಲಿನ ಸಿಪ್ಪೆ ತೆಗೆಯಿರಿ.
ಫ್ರೈ ಮಾಡಿದ ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ ಜೊತೆಗೆ ತೆಂಗಿನಕಾಯಿ (ಸಣ್ಣ ಗಾತ್ರದ ಒಂದು ಕಾಯಿ ಬೇಕಾಗುತ್ತದೆ) ತುರಿ ಹಾಕಿ. ಸ್ವಲ್ಪ ಹುಣಸೆ ಹುಳಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಸ್ವಲ್ಪ ಶುಂಠಿ ಹಾಕಿ ರುಬ್ಬಿ. ಸಾಮಾನ್ಯವಾಗಿ ಬೇರೆ ಚಟ್ನಿ ರುಬ್ಬುವಷ್ಟು ರುಬ್ಬಿ. ನಂತರ ಬೇಯಿಸಿದ ಬದನೆಕಾಯಿ ಹಾಕಿ. ಬದನೆಕಾಯಿ ಹಾಕಿ ಮಿಕ್ಸಿಯಲ್ಲಿ ಕೇವಲ ಎರಡು ಸೆಕೆಂಡ್ ಮಾತ್ರ ರುಬ್ಬಬೇಕು.
ಮಿಕ್ಸಿ ಜಾರಿನಿಂದ ರುಬ್ಬಿದ ಚಣ್ನಿಯನ್ನು ಒಂದು ಬೌಲ್​ಗೆ ಹಾಕಿ. ಅದಕ್ಕೆ ಅರ್ಧ ಕಪ್ ಮೊಸರು, ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ.

 

Share Post