ಓಮಿಕ್ರಾನ್ ಆತಂಕ – ಬ್ಯಾನ್ ಆಯ್ತು ದ.ಆಫ್ರಿಕಾದ ಸೂಪರ್ ಲೀಗ್
ಇಂಡಿಯನ್ ಪ್ರಿಮೀಯರ್ ಲೀಗ್ನ ಯಶಸ್ಸು ಹತ್ತು ಹಲವು ಸೂಪರ್ಲೀಗ್ಗಳ ಹುಟ್ಟಿಗೆ ಕಾರಣವಾಗಿತ್ತು. ಬಿಗ್ ಬ್ಯಾಶ್, ಬಾಂಗ್ಲಾ ಪ್ರಿಮೀಯರ್ ಲೀಗ್, ಕೆರಿಬಿಯನ್ ಪ್ರಿಮಿಯರ್ ಲೀಗ , ಪಾಕಿಸ್ತಾನ್ ಪ್ರಿಮೀಯರ್ ಲೀಗ್, ಶ್ರಿಲಂಕಾ ಪ್ರಮೀಯರ್ ಲೀಗ್ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.
ದಕ್ಷಿಣ ಆಫ್ರಿಕಾ ಕೂಡ 2018ರಿಂದ ತನ್ನದೇ ಆದ ಪ್ರಿಮೀಯರ್ ಲೀಗ್ ಅನ್ನು ಆಯೋಜಿಸುತ್ತಾ ಬಂದಿತ್ತು. ಆದರೆ ಈ ಬಾರಿ ಈ ಲೀಗ್ ಅನ್ನು ಆಯೋಜಿಸದಿರಲು ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿದೆ. ದ.ಆಫ್ರಿಕಾದಲ್ಲೇ ಓಮಿಕ್ರಾನ್ ಹೆಚ್ಚಾಗಿ ವ್ಯಾಪಿಸಿರುವುದೇ ಇದಕ್ಕೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈಗಾಗಲೇ ದೇಶೀಯ ಟೂರ್ನಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಇದೀಗ ಮಝಾನ್ಸಿ ಸೂಪರ್ ಲೀಗ್ ಅನ್ನು ಕೂಡ ರದ್ದುಗೊಳಿಸಿದೆ. ಇದಾಗ್ಯೂ ಮತ್ತೊಂದೆಡೆ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸರಣಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : 1983 ವಿಶ್ವಕಪ್ ನಾಯಕ ಕಪಿಲ್ ದೇವ್ಗೆ ಚಿತ್ರತಂಡ ಕೊಟ್ಟದ್ದು ೫ ಕೋಟಿ