1983 ವಿಶ್ವಕಪ್ ನಾಯಕ ಕಪಿಲ್ ದೇವ್‌ಗೆ ಚಿತ್ರತಂಡ ಕೊಟ್ಟದ್ದು ೫ ಕೋಟಿ
ಮುಂಬೈ : ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ’83’ ಸಿನಿಮಾ ಬಹು ನಿರೀಕೆ ಹುಟ್ಟಿ ಹಾಕಿದೆ. 1983ರಲ್ಲಿ ಭಾರತ ತಂಡದ ವಿಶ್ವಕಪ್ ಹಾದಿ ಹೇಗಿತ್ತು ಎಂಬ ಕಥೆಯನ್ನು ಹೊತ್ತು ಬರುತ್ತಿರುವ ಈ ಚಿತ್ರವನ್ನು ಮಾಡುವುದು ಸುಲಭವಿರಲಿಲ್ಲ. ಈ ವಿಶ್ವಕಪ್ ಸಂಬಂಧಿಸಿದ ಹಾಗೆ ಅತೀ ಕಡಿಮೆ ಸಾಕ್ಷಿಗಳು ಹಾಗು ವಿಡಿಯೋ ಪುರಾವರಗಳಿದ್ದವು.
ಈ ಚಿತ್ರವನ್ನು ನೈಜವಾಗಿ ಕಟ್ಟಿಕೊಡಲು ಚಿತ್ರತಂಡಕ್ಕೆ ಅಂದಿನ ಆಟಗಾರರ ನಿರ್ದೇಶನ ಮತ್ತು ಕಥೆಗಳ ಅವಶ್ಯಕತೆ ಇತ್ತು. ಈ ಕಾರಣದಿಂದಲೇ ೧೯೮೩ ವಿಶ್ವಕಪ್ ಪಾಲ್ಗೊಂಡಿದ್ದ ಆಟಗಾರರಿಗೆ ಸಂಭಾವನೆ ಕೊಟ್ಟು ಅವರನ್ನು ಚಿತ್ರದ ಭಾಗವನ್ನಾಗಿ ಮಾಡಿಕೊಳ್ಳಲಾಯಿತು.
ಆಟಗಾರರಿಗೆ ೧೫ ಕೋಟಿ ರೂ ಸಂಭಾವನೆ ನೀಡಿದೆ ಚಿತ್ರತಂಡ. ಕಪಿಲ್ ದೇವ್ ಒಬ್ಬರೇ ೫ಕೋಟಿ ಪಡೆದಿದ್ದಾರೆ. ಆಟಗಾರರಿಗೆ ಕೋಟಿ ಕೋಟಿ ಸಂಭಾವನೆ ಸಿಕ್ಕಿದೆ. ಹಾಗೆಯೇ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.