ಚಳಿಗಾಲದಲ್ಲಿ ಮೀನು ಸೇವಿಸುವುದು ಆರೋಗ್ಯಕ್ಕೆ ಉತ್ತಮವೇ..?
ಚಳಿಗಾಲ ರೋಗಗಳಿಗೆ ಹೇಳಿ ಮಾಡಿಸಿದಂತಹ ಕಾಲ. ಅನೇಕ ರೋಗಗಳು ಮಾನವನನ್ನು ಸುತ್ತುವರೆದು ಅಲ್ಲೋಲಕಲ್ಲೋಲ ಎಬ್ಬಿಸುತ್ತವೆ. ಈ ಸಮಯದಲ್ಲಿ ಬ್ಯಾಕ್ಟೀರಿಯ ಇತರೆ ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗುವ ಆರೋಗ್ಯದ ಜೊತೆ ಚಲ್ಲಾಟ ಆಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಆದಷ್ಟು ಒಳ್ಳೆಯ ಪೌಷ್ಠಿಕಾಂಶದಿಂದ ಕೂಡಿದ ಆಹಾರಗಳನ್ನು ಸೇವಿಸಬೇಕು ಅದರಲ್ಲಿ ಮೀನು ಕೂಡ ಒಂದು. ಚಳಿಗಾಲದಲ್ಲಿ ರೋಗಗಳಿಂದ ಮುಕ್ತಿ ಪಡೆಯಲು ಮೀನು ಉಪಯುಕ್ತವಾದ ಆಹಾರವಾಗಿದೆ. ಮೀನಿನಲ್ಲಿ ಒಮೆಗಾ 3ಪ್ಯಾಟಿ ಆಸಿಡ್ ಹೆಚ್ಚಾಗಿರುವುದರಿಂದ ಇನ್ಪೆಕ್ಷನ್ ಮತ್ತಿತರ ಕಾಯಿಲೆ ಹತ್ತಿರ ಸುಳಿಯದಂತೆ ನಮ್ಮನ್ನ ರಕ್ಷಿಸುತ್ತವೆ. ಒಂಭತ್ತು ತರದ ಅಮೈನೊ ಆಸಿಡ್ ಮನುಷ್ಯ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತವೆ. ಡಿಪ್ರಷನ್‌ನಲ್ಲಿರುವ ಮೀನನ್ನು ತಿಂದರೆ ಅದರಿಂದ ಹೊರಬರಬಹುದು. ಅಸ್ತಮಾ, ದೃಷ್ಟಿದೋಷ, ಇತರೆ ಸವಾಲುಗಳನ್ನು ಎದುರಿಸುತ್ತದೆ, ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ಹಿಮೊಗ್ಲೋಬಿನ್ ಹೆಚ್ಚೆಚ್ಚು ಉತ್ಪತ್ತಿ ಮಾಡುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.