ಮಕ್ಕಳನ್ನು ಹೆರೋದು..ಮಾರೋದು ಇದೇ ಇವರ ಕಾಯಕ
ಚೈನಾ: ಒಂಭತ್ತು ತಿಂಗಳು ಹೊತ್ತು ಹೆತ್ತ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಮಾರಾಟ ಮಾಡುವ ಘಟನೆ ಚೈನಾದಲ್ಲಿ ನಡೆದಿದೆ. ಈ ಸಂಬಂಧ ನ್ಯಾಯಾಲಯ ಅವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಹೌದು ಆಶ್ಚರ್ಯವಾದ್ರು ಇದು ನಿಜ. ಮತ್ತೇನು ಆ ಕುಟುಂಬ ಬಡತನದಿಂದ ಕೂಡಿಲ್ಲ ಆದ್ರೂ ಮಕ್ಕಳನ್ನು ಹೆತ್ತು ಬೇರೆಯವರಿಗೆ ಮಾರುವುದೇ ಅವರ ಬ್ಯುಸಿನೆಸ್. ಅಂಗಡಿಯಲ್ಲಿ ತರಕಾರಿ, ಹಣ್ಣು, ಸಾಮಗ್ರಿಗಳನ್ನು ಮಾರುವ ಹಾಗೆ ಒಂದೊಂದು ಮಗುವಿಗೆ ಒಂದೊಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡುವ ತಂದೆ ತಾಯಿಗೆ ಏನನ್ನಬೇಕು.
ಇದಕ್ಕೆ ಅವರು ಒಬ್ಬ ಏಜೆಂಟ್‌ನನ್ನು ಕೂಡಾ ಇಟ್ಟುಕೊಂಡಿದ್ದಾರೆ ಅವನಿಗೆ ಒಂದು ಮಗುವಿಗೆ ಕನಿಷ್ಟ 35,000 ಸಾವಿರ ಕಮಿಷನ್ ಅಂತೆ. ಇದೆಲ್ಲ ನಡೆಯುತ್ತಿರುವ ಚೈನಾದಲ್ಲಿ ಯಾಂಗ್ ಮತ್ತು ಯುವಾನ್ ಎಂಬ ದಂಪತಿ ಕಂಡುಕೊಂಡಿರುವ ಬ್ಯುಸಿನೆಸ್ ಇವರಿಗೆ ಸಪೋರ್ಟ್ ಮಾಡ್ತಿರುವ ʻಲಿʼ ಎಂಬ ಮಧ್ಯವರ್ತಿ. ಪತ್ನಿ ಮಕ್ಕಳನ್ನು ಹೆತ್ತು ಕೊಟ್ಟರೆ ಗಂಡ ಆ ಮಗುವನ್ನು ಮಾರುವುದು.
ಮಧ್ಯವರ್ತಿ ಅವರಿಗಾಗಿ ಗ್ರಾಹಕರನ್ನು ಹುಡುಕಿಕೊಡುವುದು. ಹೀಗೆ ಸುಮಾರು 2012 ರಿಂದ ಇಲ್ಲಿವರೆಗೆ ಸುಮಾರು ಐದು ಮಕ್ಕಳನ್ನು ಬರೋಬ್ಬರಿ 21ಲಕ್ಷದ 42ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರಂತೆ. ಈ ವಿಚಾರವನ್ನು ಅಲ್ಲಿನ ಪೊಲೀಸರಿಗೆ ತಿಳಿದಿದೆ. ಮಗು ಮಾರಾಟ ಮಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಗೆ 10ವರ್ಷ ಕಠಿಣ ಜೈಲು ಶಿಕ್ಷೆಯನ್ನು ಅಲ್ಲಿನ ನ್ಯಾಯಾಲಯ ವಿಧಿಸಿದೆ.