ವಿಮಾನ ನಿಲ್ದಾಣ ಭದ್ರತೆಯಲ್ಲಿ ಬೆಲ್ಜಿಯನ್ ತಳಿಯ ಶ್ವಾನಗಳದ್ದೇ ಕಾರುಬಾರು
ಬೆಂಗಳೂರು: ಮಾನವನಿಗಿಂತ ಶ್ವಾನಗಳಿಗೆ ಬುದ್ದಿವಂತಿಕೆ ಹೆಚ್ಚು. ಅದಕ್ಕಾಗಿಯೇ ಪೊಲೀಸ್ ಹಾಗೂ ಮಿಲಿಟರಿ ಪಡೆಗಳಲ್ಲಿ ಶ್ವಾನಗಳಿಗೆ ಸ್ಥಾನವಿದೆ. ಇದೀಗ ವಿಮಾನ ನಿಲ್ದಾಣಗಳಲ್ಲಿ ಭದ್ರತೆಗೂ ಸಹ ಶ್ವಾನಗಳನ್ನ ನಿಯೋಜನೆ ಮಾಡುವಲ್ಲಿ ಬೆಂಗಳೂರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಜ್ಜಾಗಿದೆ. ಈಗಾಗಲೇ ತರಬೇತಿ ಪೂರ್ಣಗೊಳಿಸಿ ಕೆಲಸಕ್ಕೆ ಹಾಜರಾಗಲು ಮಾಲಿನೋಯಿಸ್ ತಳಿಯ ಶ್ವಾನಗಳು ಸಿದ್ದವಾಗಿವೆ. ಇದೇ ಮೊದಲ ಬಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತೆಗಾಗಿ ಶ್ವಾನಗಳನ್ನು ನಿಯೋಜಿಸಲಾಗಿದೆ.
ಸಿಐಎಸ್ಎಫ್ ಐದು ಹೆಣ್ಣು ಶ್ವಾನಗಳಿಗೆ ಸ್ಪೋಟಕ ನಾಶ ಮಾಡುವ ವಿಶೇಷ ತರಬೇತಿ ನೀಡಿದೆ. ಸವಾಲಿನ ಪರಿಸ್ಥಿತಿಯಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ಶ್ವಾನಗಳನ್ನು ಸಿಐಎಸ್ಎಫ್ ತನ್ನ ಕೆ-9ಶ್ವಾನಪಡೆಯಲ್ಲಿ ಸೇರ್ಪಡೆ ಮಾಡ್ತಿದೆ. ಈ ಮಾಲಿನೋಯಿಸ್ ಪಡೆಯಲ್ಲಿ 7ಬೆಲ್ಜಿಯನ್ ತಳಿಯ ಶ್ವಾನಗಳಿವೆಯಂತೆ.
ಇವುಗಳಿಗೆ ತರಳುವಿನ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ತರಬೇತಿ ಶಾಲೆಯಲ್ಲಿ ಗ್ರೇಸಿ, ಲೈಕಾ, ಲಿಲಿ, ರಾಂಬೊ, ಡೈಸಿ ಮತ್ತು ಬೆಲ್ಲಾ ತರಬೇತಿ ಪಡೆದಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಸಿಐಎಸ್ಎಫ್ ಶ್ವಾನ ತಂಡ ಈಗಾಗಲೇ ಲ್ಯಾಬ್ರಡಾರ್ಗಳು, ಜರ್ಮನ್ ಶೆಫರ್ಡ್ಸ್, ಗೋಲ್ಡನ್ ರಿಟ್ರೈವರ್ಸ್, ಕಾಕರ್ ಸ್ಪೈನಿಯೆಲ್ ಮತ್ತು ಒಂದು ಮಲಿನೋಯಿಸ್ ತಳಿಯ ಶ್ವಾನಗಳನ್ನು ಜೊತೆಗೆ ಬೆಲ್ಜಿಯನ್ ತಂಡವನ್ನೂ ಸೇರ್ಪಡೆಮಾಡಿಕೊಂಡಿದೆ.