Cinema

ಡಿನ್ನರ್‌ ಪಾರ್ಟಿಗಾಗಿ ಮುಂಬೈ ತೆರಳಿದ ಗೀತ-ಗೋವಿಂದ

ಮುಂಬೈ: ಟಾಲಿವುಡ್‌ನ ಕ್ಯೂಟ್‌ ಜೋಡಿ ಎಂದೇ ಕರೆಯುವ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮುಂಬೈ ಹೊಟೇಲ್‌ವೊಂದರಲ್ಲಿ ಡಿನ್ನರ್‌ಗಾಗಿ ತೆರಳಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ. ಅತೀ ಕಡಿಮೆ ಸಮಯದಲ್ಲಿ ʻಹೀರೋʼ ಪದವಿ ಗಳಸಿದ ವಿಜಯ್‌ ದೇವರಕೊಂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ಪೂರಿ ಜಗನ್ನಾಥ್ ನಿರ್ದೇಶನದ ʻಲೈಗರ್‌ʼ ಚಿತ್ರ ಮುಂಬೈನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಇದೇ ವೇಳೆ ಅಲ್ಲಿಗೆ ರಶ್ಮಿಕಾ ಮಂದಣ್ಣ ಮುಂಬೈಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಈ ಹಿಂದಿನಿಂದಲೂ ಇವರಿಬ್ಬರ ನಡುವೆ ಸುಮಧುರ ಬಾಂಧವ್ಯ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಪುಷ್ಠಿ ಕೊಡುವಂತೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮುಂಬೈ ಬಾಂದ್ರಾದಲ್ಲಿರುವ ಒಂದು ರೆಸ್ಟೋರೆಂಟ್‌ನಲ್ಲಿ ಇವರಿಬ್ಬರು ಡಿನ್ನರ್‌ ಮಾಡು ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ಈಗ ಇನ್ನಷ್ಟು ಸುದ್ದಿ ಮಾಡ್ತಿವೆ.

Share Post