BengaluruCrime

ಬೆಂಗಳೂರಿನಲ್ಲಿ ಭುಗಿಲೆದ್ದ ನಾಡ ಕಿಚ್ಚು: ಶಿವಸೇನೆ ಬಾವುಟಕ್ಕೆ ಬೆಂಕಿ

ಬೆಂಗಳೂರು: ಎಂಇಎಸ್‌ ಪುಂಡಾಟಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಕರವೇ ಶಿವರೇಮೇಗೌಡ ಬಣದಿಂದ ಹೋರಾಟ ನಡೆಯುತ್ತಿದೆ. ಶಿವಸೇನೆ ಬಾವುಟ ತುಳಿದು, ಬೆಂಕಿಹಚ್ಚಿ, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಈಟನೆ ಬಗ್ಗೆ ಮಾತನಾಡಿದ ಶಿವರಾಮೇಗೌಡ ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆ ವಿರುದ್ಧ ಕಿಎಇ ಕಾರಿದ್ದಾರೆ. ನಮ್ಮ ಅಸ್ಮಿತೆಯನ್ನು ಕಾಪಾಡಲು ರಾಜ್ಯ ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆ ಹಿಂದೆಮುಂದೆ ನೋಡ್ತಿದೆ. ಶಿವಸೇನೆ ಬಾವುಟ ಸುಡಲಿಕ್ಕೆ ಹೋದ್ರೆ ನಮ್ಮನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪ್ರತಿಭಟನೆ ನಡೆಸಲು ಪೊಲೀಸರು ಬಿಡ್ತಿಲ್ಲ. ರಾಯಣ್ಣ ಪ್ರತಿಮೆಗೆ ಮಸಿ ಬಳಿದವರನ್ನು ಅರೆಸ್ಟ್‌ ಮಾಡಲಾಗಿದೆ ಅಂತಾರೆ ಅದೆಲ್ಲಾ ಸುಳ್ಳು. ಪುಂಡರನ್ನು ಸದೆಬಡಿಯುವ ಕೆಲಸ ಆಗ್ತಿಲ್ಲ. ಕನ್ನಡ ನಾಡಿನ ಸ್ವಾಭಿಮಾನವನ್ನು ಅಡ ಇಡುವ ಕೆಲಸವನ್ನು ರಾಜಕಿಐ ನಾಯಕರು ಮಾಡ್ತಿದಾರೆ. ಕನ್ನಡಿಗರ ಶಾಂತಿಯನ್ನು ದೌರ್ಬಲ್ಯ ಅಂತ ಪರಿಗಣಿಸಬೇಡಿ, ನಮ್ಮನ್ನು ಕೆದಕಿದ್ರೆ ನಿಮ್ಮ ಅಂತ್ಯ ಗ್ಯಾರೆಂಟಿ. ಬೆಳಗಾವಿಯಲ್ಲಿ ಹಿಟ್ಲರ್‌ ಸಂಸ್ಕೃತಿ ತಲೆದೂರಿದೆ. ನಮ್ಮವರನ್ನು ಪ್ರತಿಭಟಿಸಲು ಪೊಲೀಸರು ಬಿಡುತ್ತಿಲ್ಲ. ನಮ್ಮ ನಾಡಿನ ತಂಟೆಗೆ ಎಂಇಎಸ್‌ ಬರದಂತೆ ನಾವು ನೋಡಿಕೊಳ್ತೀವಿ ಎಂದು ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post