ಒಮಿಕ್ರಾನ್ ಅಬ್ಬರ: ನೆದರ್ಲ್ಯಾಂಡ್ ಲಾಕ್ಡೌನ್
ನೆದರ್ಲ್ಯಾಂಡ್: ಊಹೆಗೂ ಮೀರಿ ನೆದರ್ಲ್ಯಾಂಡ್ನಲ್ಲಿ ಒಮಿಕ್ರಾನ್ ಕೇಸ್ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಾಗಾಗಿ ಇಂದಿನಿಂದ ಜನವರಿ 14ರವರೆಗೆ ಲಾಕ್ಡೌನ್ ಜಾರಿ ಮಾಡುವಂತೆ ಪ್ರಧಾನಿ ಮಾರ್ಕ್ ರುಟ್ಟೆ ಆದೇಶಿಸಿದ್ದಾರೆ. ನಿನ್ನೆ ಹೇಗ್ನಲ್ಲಿ ಅಧಿಕಾರಿಗಳ ಸಭೆಯಲ್ಲಿ ಐದನೇ ಅಲೆ ದೇಶದಲ್ಲಿ ತಾಂಡವವಾಡುವ ಮುನ್ನ ಜಾಗ್ರತೆ ವಹಿಸುವುದು ಮುಖ್ಯ ಎಂಬ ಸಲಹೆ ಮೇರೆಗೆ ಲಾಕ್ಡೌನ್ ಜಾರಿ ಮಾಡಿದ್ದಾರೆ. ಸೂಪರ್ ಮಾರ್ಕೆಟ್, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಇತರೆ ಅತ್ಯವಶ್ಯಕ ಇರುವ ಶಾಪ್ಗಳನ್ನು ತೆರೆಯಲು ಸೂಚನೆ ಕೊಟ್ಟಿದ್ದಾರೆ. ಉಳಿದ ಎಲ್ಲಾ ಶಾಪಿಂಗ್ ಕಾಂಪ್ಲೆಕ್ಸ್, ಶಾಲಾ-ಕಾಲೇಜು, ಕಾರ್ಖಾನೆಗಳು, ಮ್ಯೂಸಿಯಂ, ಥಿಯೇಟರ್ಸ್, ಝೂ-ಪಾರ್ಕ್ ಎಲ್ಲವನ್ನು ಮುಚ್ಚುವಂತೆ ಆದೇಶಿಸಿದ್ದಾರೆ.