CinemaCrime

ಬಗೆದಷ್ಟೂ ಬಯಲಾಗ್ತಿದೆ ಜಾಕ್ವೆಲಿನ್‌ ಬಳಿಯಿರುವ ದುಬಾರಿ ಗಿಫ್ಟ್‌ಗಳ ಖಜಾನೆ

ದೆಹಲಿ: ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್‌ ಚಂದ್ರಶೇಖರ್‌ ಮತ್ತೊಂದು ಆಘಾತಕಾರಿ ಸುದ್ದಿಯೊಂದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆನಿಲ್‌ ಹೆಸರು ಥಳುಕು ಹಾಕಿಕೊಂಡಿದೆ. ಇದೀಗ ಸುಕೇಶ್‌ ಜಾಕ್ವೆಲಿನ್‌ಗೆ ಅತಿ ದುಬಾರಿ ಗಿಫ್ಟ್‌ಗಳನ್ನು ನೀಡಿರೋದಾಗಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ನಾನು ಜಾಕ್ವೆಲಿನ್‌ ಡೇಟಿಂಗ್‌ನಲಲಿದ್ವೆ ಆ ವೇಳೇ ಆಕೆಗೆ ಅತ್ಯಂತ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಿರುವುದಾಗಿ ಸುಕೇಶ್‌ ಒಪ್ಪಿಕೊಂಡಿದ್ದಾನೆ. ಲಕ್ಷ ಲಕ್ಷ ಬೆಲೆಬಾಳುವ 15ಜೊತೆ ಕಿವಿಯೋಲೆ, ಎರಡು ಚಿನ್ನ ಮತ್ತು ವಜ್ರದ ನೆಕ್ಲೆಸ್‌ ಸೆಟ್‌ ನೀಡಿದ್ದನಂತೆ ಇದರ ಬೆಲೆ ಬರೋಬ್ಬರಿ 8ಕೋಟಿ. ಇಷ್ಟೆ ಅಲ್ಲದೆ ಕಾಸ್ಟ್ಲಿ ಬ್ಯಾಗ್‌ಗಳು, 1.80ಲಕ್ಷ ಹಣ, BMW X5 ಕಾರು, ಇಂಟರ್‌ನ್ಯಾಷನಲ್‌ ಕಂಪನಿಯ ಗೂಚಿ ಬ್ಯಾಗ್‌, ಫ್ರಾನ್ಸ್‌ ಕಂಪನಿ ಲೂಯಿಸ್‌ ವಿಟಾಸ್‌ ಅವರ ಬೆಲೆಬಾಳುವ ಶೂಗಳನ್ನು ಕೂಡ ಜಾಕ್ವೆಲಿನ್‌ಗೆ ಗಿಫ್ಟ್‌ ನೀಡಿದ್ನಂತೆ ಸುಕೇಶ್.‌ ಆದ್ರೆ ಈ ಬಗ್ಗೆ ನಟಿ ಹೇಳೋದೆ ಬೇರೆ ಆತ ಕೊಟ್ಟಿರುವ ಉಡುಗೊರೆಗಳನ್ನು ನಾನು ವಾಪಸ್‌ ಮಾಡಿದ್ದೇನೆ. ನನಗೂ ಸುಕೇಶ್‌ಗೂ ಯಾವುದೇ ಸಂಬಂಧ ಇಲ್ಲ ಅಂತ ಇಡಿ ಅಧಿಕಾರಿಗಳ ಬಳಿ ನಟಿ ಜಾಕ್ವೆಲಿನ್‌ ಹೇಳಿದ್ದಾರಂತೆ.

 

Share Post