Cinema

ಬಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ಕಿಚ್ಚ ಅಭಿನಯ: ದ್ರಾವಿಡ್‌ ಬಯೋಪಿಕ್‌ ತೆರೆಗೆ?

ಬೆಂಗಳೂರು: ಈಗ ಎಲ್ಲೆಡೆ ಬಯೋಪಿಕ್‌ ಸಿನಿಮಾಗಳದ್ದೇ ಕಾರುಬಾರು. ಕ್ರಿಕೆಟರ್‌, ರಾಷ್ಟ್ರನಾಯಕರು, ಅಥವಾ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಸಿನಿಮಾ ಮಾಡುತ್ತಿರುವುದು ಹೊಸದೇನಲ್ಲ. ಈಗ ಅದರ ಸಾಲಿಗೆ ನಮ್ಮ ಸ್ಯಾಂಡಲ್‌ವುಡ್‌ ಹೀರೋ ಕಿಚ್ಚ ಸುದೀಪ್‌ ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ದೊರಕಿದೆ. ಹೌದು ನಿನ್ನೆ ನಡೆದ ಕಪಿಲ್‌ ದೇವ ಜೀವನಾಧಾರಿತ ಹಾಗೂ 1983ರ ವಿಶ್ವಕಪ್‌ ವಿಜಯ ಯಾತ್ರೆ ಕುರಿತ `83′ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕ್ರಿಕೆಟರ್‌ ರಾಹುಲ್‌ ದ್ರಾವಿಡ್‌ ಅವರ ಬಯೋಪಿಕ್‌ ಮಾಡುವ ಆಸೆಯನ್ನು ಸಿನಿಮಾ ನಿರ್ದೇಶಕಿ ವ್ಯಕ್ತಪಡಿಸಿದ್ರು. ಅದನ್ನು ಕಬೀರ್‌ ಸಿಂಗ್‌ ಅವರು ನಿರ್ದೇಶನ ಮಾಡಿದ್ರೆ ಇನ್ನು ಚನ್ನಾಗಿರುತ್ತೆ ಅಂದ್ರು. ಅಲ್ಲದೆ ಆ ಬಯೋಪಿಕ್‌ನಲ್ಲಿ ಸುದೀಪ್ ಅವರು ರಾಹುಲ್ ದ್ರಾವಿಡ್ ಪಾತ್ರ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ನಟ ಸುದೀಪ್, ”ನಾನು ನಟಿಸಲು ಸಿದ್ದ, ನಿರ್ದೇಶಕ ಕಬೀರ್ ಸಿಂಗ್ ಇಲ್ಲಿಯೇ ಇದ್ದಾರೆ. ನೀವು ನೇರವಾಗಿ ಅವರನ್ನೇ ಕೇಳಿ ಬಿಡಿ ನಾನಂತೂ ನಟಿಸಲು ತಯಾರಾಗಿದ್ದೀನಿ” ಎಂಬ ಸುದೀಪ್‌ ಅವರ ಮಾತಿಗೆ ಹಕ್ಕು ತಂದುಕೊಟ್ರೆ ನಿರ್ದೇಶನ ಮಾಡುವುದಕ್ಕೆ ನಾನು ರೆಡಿ ಎಂಬ ಮಾತನ್ನು ಕಬೀರ್‌ ಸಿಂಗ್‌ ತಿಳಿಸಿದ್ರು. ಈ ಸಿನಿಮಾವನ್ನು ಮುಂಬೈನಲ್ಲಿ ಪ್ರೆಸೆಂಟ್‌ ಮಾಡಿಕೊಡುವುದಾಗಿ ರಣ್ವೀರ್‌ ಸಿಂಗ್‌ ಭರವಸೆ ನೀಡಿದ್ರು. ʻ83′ ಸಿನಿಮಾವು ಡಿಸೆಂಬರ್ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾವನ್ನು ಕರ್ನಾಟಕದಲ್ಲಿ ನಟ ಸುದೀಪ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ಹಂಚಿಕೆಯೂ ಅವರದ್ದೇ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ.

Share Post