ನೀರು ಹೆಚ್ಚು ಸೇವಿಸಿದರೆ ರಕ್ತದೊತ್ತಡ ನಿವಾರಿಸಬಹುದೇ..?
ಬೆಂಗಳೂರು; ಮನುಷ್ಯ ಬದುಕೋದಕ್ಕೆ ಆಹಾರ, ಗಾಳಿ ಎಷ್ಟು ಮುಖ್ಯವೋ, ನೀರು ಕೂಡಾ ಅಷ್ಟೇ ಮುಖ್ಯ.. ನಿತ್ಯ ಇಂತಿಷ್ಟು ಅಂತ ನೀರು ಕುಡಿದರಷ್ಟೇ ಮನುಷ್ಯ ಆರೋಗ್ಯವಾಗಿರುತ್ತಾನೆ.. ನಮ್ಮ ದೇಹ ಹೈಡ್ರೈಟ್ ಇದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯವಾಗಯತ್ತದೆ.. ದೇಹಕ್ಕೆ ಸರಿಯಾಗಿ ಆಮ್ಲಜನಕ ಮತ್ತು ರಕ್ತ ಪೂರೈಕೆಯಾಗಬೇಕಾದರೆ ದೇಹಕ್ಕೆ ಸಾಕಾಗುವಷ್ಟು ನೀರನ್ನು ನಾವು ಕುಡಿಯಬೇಕಾಗುತ್ತದೆ..
ದೇಹಕ್ಕೆ ಬೇಕಾದಷ್ಟು ನಿಯಮಿತವಾಗಿ ನಾವು ಸೇವನೆ ಮಾಡದೇ ಹೋದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.. ರಕ್ತದೊತ್ತಡ ನಿವಾರಣೆ ಮಾಡೋದಕ್ಕೂ ಕೂಡಾ ಸರಿಯಾಗಿ ನಮ್ಮ ದೇಹಕ್ಕೆ ನೀರು ಕುಡಿಯಬೇಕು.. ಪ್ರತಿದಿನ ದೇಹಕ್ಕೆ ಬೇಕಾಗುವಷ್ಟು ಶುದ್ಧ ನೀರನ್ನು ಕುಡಿಯುತ್ತಾ ಬಂದರೆ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.. ಮುಂದೆ ಬರಬಹುದಾದ ರಕ್ತದೊತ್ತಡ ತಡೆಯಲು ಕೂಡಾ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯಬೇಕು..
ಮನುಷ್ಯನ ದೇಹದಲ್ಲಿ ಶೇಕಡಾ 73ರಷ್ಟು ನೀರು ಇರುತ್ತದೆ.. ಅಷ್ಟಿದ್ದರೆ ಮಾತ್ರ ರಕ್ತದೊತ್ತಡ ನಿಯಂತ್ರಣವಾಗುತ್ತದೆ.. ನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂನಂತಹ ಖನಿಜಗಳು ಇರುವುದರಿಂದ ಬಿಪಿಯನ್ನು ಕೂಡಾ ಕಡಿಮೆ ಮಾಡಿಕೊಳ್ಳಬಹುದು.. ನೀರಿನೊಂದಿಗೆ ನಿಂಬೆ ರಸ, ಸೌತೆಕಾಯಿ, ಗಿಡಮೂಲಿಕೆ ಚಹಾ, ಸೂಪ್ಗಳು, ಹಾಲು ಮೊಸರು ಸೇವಿಸುವುದರ ಮೂಲಕವೂ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.. ನೀರು ಹೆಚ್ಚು ಕುಡಿದರೆ ದೇಹದಿಂದ ವಿಷ ಹೊರಹಾಕುತ್ತದೆ.. ಜೊತೆಗೆ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.. ನೀರು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.. ಅದರಿಂದಾಗಿ ರಕ್ತದೊತ್ತಡ ಕೂಡಾ ಕಾಪಾಡುತ್ತದೆ..