CrimeDistricts

ಇನ್ಸ್ಟಾಗ್ರಾಮ್ ಪ್ರಿಯಕರನಿಗಾಗಿ ಗಂಡನನ್ನೇ ಕೊಂದ ಮಹಿಳೆ!

ಉಡುಪಿ; ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಯುವಕನಿಗಾಗಿ ಮಹಿಳೆಯೊಬ್ಬಳು ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಿದ್ದಾಳೆ.. ದಿಲೀಪ್ ಹೆಗ್ಡೆ ಎಂಬ ಯುವಕನ ಜೊತೆ ಲವ್ ನಲ್ಲಿ ಬಿದ್ದಿದ್ದ ಪ್ರತಿಮಾ ಎಂಬ ಮಹಿಳೆ, ಗಂಡ ಬಾಲಕೃಷ್ಣ ಪೂಜಾರಿಗೆ ಊಟದಲ್ಲಿ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇದಕ್ಕೆ ಪ್ರಿಯಕರ ದಿಲೀಪ್ ಕೂಡಾ ಸಾಥ್ ನೀಡಿದ್ದಾನೆ..

  ಮೊದಲಿಗೆ ಸ್ಲೋ ಪಾಯಿಸನ್ ನೀಡಿ ನರಳಿ ನರಳಿ ಸಾಯಲಿ ಎಂದು ನೋಡಿದ್ದಾರೆ. ನಂತರ ಊಟದಲ್ಲಿ ವಿಷ ಹಾಕಿ ಕೊಂದಿದ್ದಾರೆ.

  ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಅಜೆಕಾರಿನಲ್ಲಿ  ಈ ಘಟನೆ ನಡೆದಿದೆ..  ಅಕ್ಟೋಬರ್ 20ರಂದು ಬಾಲಕೃಷ್ಣ ಪೂಜಾರಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು.. ಅದೇ ರಾತ್ರಿ ಬಾಲಕೃಷ್ಣ ಪೂಜಾರಿ ಸಾವನ್ನಪ್ಪಿದ್ದು,  ಕುಟುಂಬಸ್ಥರೆಲ್ಲ ಸೇರಿ ಅಂತ್ಯಸಂಸ್ಕಾರ ಮಾಡಿದ್ದರು.. ನಂತರ ವಿಧಿ ವಿಧಾನಗಳು ನಡೆಯುತ್ತಿದ್ದ ದಿನ ತನ್ನ ಸಹೋದರನ ಬಳಿ ಪ್ರತಿಮಾ ಕೊಲೆ ಮಾಡಿರುವ ವಿಚಾರವನ್ನು ಹೇಳಿದ್ದಾಳೆ.. ಪ್ರಿಯಕರ ದಿಲೀಪ್ ಜೊತೆ ಸೇರಿ ಗಂಡನನ್ನು ಸಾಯಿಸಿರುವುದಾಗಿ ಹೇಳಿದ್ದಾಳೆ..

   ತಿಂಗಳಿಂದ ಬಾಲಕೃಷ್ಣ ಪೂಜಾರಿಗೆ ಅನಾರೋಗ್ಯ ಕಾಡಲು ಶುರುವಾಗಿತ್ತು.. ಜ್ವರ, ವಾಂತಿ ದಿನವೂ ಆಗುತ್ತಿತ್ತು.. ಕಾಮಾಲೆ ರೋಗ ಇದೆ ಎಂದು ಕಾರ್ಕಳ, ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ತೋರಿಸಲಾಗಿತ್ತು.. ಮನೆಗೆ ವಾಪಾಸ್ ಬಂದ ಮೇಲೆ ಉಸಿರುಗಟ್ಟಿಸಿ ಸಾಯಿಸಲಾಗಿದೆ.

 

Share Post