ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ; ಜೆಪಿ ನಡ್ಡಾ
ಉಡುಪಿ; ದೇಶದ ಬಹುತೇಕ ಎಲ್ಲಾ ಪಕ್ಷಗಳು ಕುಟುಂಬ ರಾಜಕಾರಣ ಮಾಡ್ತಿವೆ, ಕಾಂಗ್ರೇಸ್ ನಲ್ಲಿ ಇಡೀ ಕುಟುಂಬವೇ ರಾಜಕಾರಣ ಮಾಡ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕುಟುಂಬ ರಾಜಕಾರಣದ ಬಗ್ಗೆ ಗುಡುಗಿದ್ದಾರೆ.
ಉಡುಪಿಯಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ದೇಶದ ಬಹುತೇಕ ಪಕ್ಷಗಳು ಕುಟುಂಬ ರಾಜಕಾರ ಮಾಡ್ತಿದೆ. ಕಾಂಗ್ರೇಸ್ ನಲ್ಲಿ ಅಮ್ಮ, ಮಗ, ಮಗಳು ಇಡೀ ಕುಟುಂಬವೇ ರಾಜಕಾರಣ ಮಾಡ್ತಿದ್ದಾರೆ,ಆದರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ ಎಂದರು.
ಬಿಜೆಪಿಗೆ ಯಶಸ್ಸು ಸ್ಥಾನ ಮಾನ ಸಿಕ್ಕಿದ್ದೆ ಉಡುಪಿಯಲ್ಲಿ. 1968 ರಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಭಾರಿಗೆ ಉಡುಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಮುನಿಸಿಪಾಲಿಟಿ ಯಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು, ಬಿಜೆಪಿ ಇತಿಹಾಸದಲ್ಲಿ ಉಡುಪಿಗೆ ವಿಶೇಷ ಸ್ಥಾನಮಾನವಿದೆ. ಮೊದಲ ಭಾರಿಗೆ ಬಿಜೆಪಿಗೆ ಯಶಸ್ಸು ಸ್ಥಾನಮಾನ ಸಿಕ್ಕಿದ್ದೆ ಉಡುಪಿಯಲ್ಲಿ ಎಂದರು.