HealthLifestyle

ಈ ಆಹಾರಗಳನ್ನು ಪದೇ ಪದೇ ಕಾಯಿಸಿ ತಿನ್ನಬಾರದು!

ಬೆಂಗಳೂರು; ಆರೋಗ್ಯಕರ ಆಹಾರಗಳನ್ನು ಸೇವಿಸಿದರೆ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.. ಅದೂ ಕೂಡಾ ನಾವು ತಿನ್ನುವ ಆಹಾರ ಎಂತಹದ್ದಾಗಿರಬೇಕು..? ಆಹಾರವನ್ನು ಯಾವಾಗ ತಿನ್ನಬೇಕು..? ಹೇಗೆ ತಿನ್ನಬೇಕು ಅನ್ನೋದು ಗೊತ್ತಿರಬೇಕು.. ಇಲ್ಲದಿದ್ದರೆ ಆರೋಗ್ಯ ಹದಗೆಡುತ್ತದೆ.. ನಾವು ಕೆಲ ಆಹಾರಗಳನ್ನು ಪದೇ ಪದೇ ಕಾಯಿಸಿ ಹೆಚ್ಚು ಕಾಲ ಇಟ್ಟುಕೊಂಡು ತಿಂದರೆ ಅನಾರೋಗ್ಯಕ್ಕೀಡಾಗುತ್ತೇವೆ.. ಕ್ಯಾನ್ಸರ್‌ನಂತರ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತೇವೆ..
ಬಿಸಿಬಿಸಿ ತಯಾರಿಸಿದ ಅಡುಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.. ಇನ್ನು ಬೆಳಗ್ಗೆ ಮಾಡಿದ್ದು ಮಧ್ಯಾಹ್ನ ತಿಂದರೂ ಕೆಲ ಆಹಾರಗಳಿಂದ ಯಾವುದೇ ತೊಂದರೆಯಾಗೋದಿಲ್ಲ.. ಆದ್ರೆ ಕಾಯಿಸಿ ಕಾಯಿಸಿ ದಿನಗಟ್ಟೆಲೆ ಇಟ್ಟುಕೊಂಡು ತಿನ್ನುತ್ತಾರೆ.. ಇದು ಡೇಂಜರ್‌.. ಅದೂ ಕೂಡಾ ಕೆಲ ಆಹಾರಗಳನ್ನು ಹೀಗೆ ಪದೇ ಪದೇ ಕಾಯಿಸಿ ತಿಂದರೆ ಆರೋಗ್ಯ ಹಾನಿ ಎಂದು ತಜ್ಞರು ಹೇಳುತ್ತಾರೆ..
ಮತ್ತೆ ಕಾಯಿಸಬಾರದ 4 ತಿಂಡಿಗಳು
1. ಆಲೂಗಡ್ಡೆಯಿಂದ ಮಾಡಿದ ಆಹಾರ;
ಆಲೂಗಡ್ಡೆಯನ್ನು ಸಾಂಬಾರಿಗೆ ಬಳಸುತ್ತೇವೆ, ಅದರಿಂದ ಪಲ್ಯ ಮಾಡುತ್ತೇವೆ.. ಇದರಲ್ಲಿ ಕಾರ್ಬೋಹೈಡ್ರೇಟ್ಸ್‌ ಜಾಸ್ತಿ ಇರುತ್ತೆ.. ಹೀಗಾಗಿ ಆಲೂಗಡ್ಡೆಯಿಂದ ಮಾಡಿದ ಆಹಾರಗಳನ್ನು ಪದೇ ಪದೇ ಕಾಯಿಸಿದರೆ, ಅಕ್ರಿಲಮೈಡ್‌ ಉತ್ಪತ್ತಿಯಾಗುತ್ತದೆ.. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು.. ಹೀಗಾಗಿ, ಆಲೂಗಡ್ಡೆಯಿಂದ ಮಾಡಿದ ಆಹಾರವನ್ನು ಒಂದು ಬಾರಿ ಮಾತ್ರ ಬೇಯಿಸಿ, ಆದಷ್ಟು ಒಂದು ಹೊತ್ತಿಗೆ ಬಳಸುವುದು ಒಳ್ಳೆಯದು..
2. ಪ್ರೋಸೆಸ್‌ ಮಾಡಿರುವ ಮಾಂಸ;
ಮೊದಲಿಗೆ ಮಾಂಸವನ್ನು ಅಂಗಡಿಯಲ್ಲೇ ಕಟ್‌ ಮಾಡಿಕೊಡುತ್ತಿದ್ದರು.. ಆದ್ರೆ ಈಗ ಮಟನ್‌ ಮುಂತಾದ ಮಾಂಸಗಳು ಎಲ್ಲಿಯೋ ಕಟ್‌ ಮಾಡಿ ಪ್ರೋಸೆಸ್‌ ಮಾಡಲಾಗುತ್ತದೆ.. ದಿನಗಟ್ಟಲೆ ಅದನ್ನು ಸಾಗಾಟ ಮಾಡಲಾಗುತ್ತದೆ.. ಗ್ರಾಹಕರ ಕೈಗೆ ಸಿಗುವಷ್ಟರಲ್ಲಿ ಎರಡು ಮೂರು ದಿನ ಆಗಿರುತ್ತದೆ.. ಅದಕ್ಕೆ ಕೆಮಿಕಲ್ಸ್‌ ಹಾಕಿರೋದ್ರಿಂದ ಕೆಟ್ಟಿರೋದಿಲ್ಲ.. ಆದ್ರೆ ಇದನ್ನು ಒಮ್ಮೆ ತಯಾರಿಸಿ ಒಂದೇ ಹೊತ್ತಿಗೆ ತಿಂದುಬಿಟ್ಟರೆ ಯಾವುದೇ ತೊಂದರೆಯಾಗಲಾರದು.. ಆದ್ರೆ, ಪದೇ ಪದೇ ಬೇಯಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ..
3.ಮೀನು;
ಮೀನು ಕೂಡಾ ಒಮ್ಮೆ ತಯಾರು ಮಾಡಿ ತಿಂದುಬಿಡಬೇಕು.. ಅದು ಬಿಟ್ಟು ಅದನ್ನು ಪದೇ ಪದೇ ಕಾಯಿಸಿಕೊಂಡು ತಿನ್ನಬಾರದು.. ಮೀನಿನಲ್ಲಿ ಪ್ರೋಟೀನ್‌ ಅಂಶ ಹಾಗೂ ಒಮೆಗಾ 3 ಫ್ಯಾಟಿ ಆಸಿಡ್‌ ಜಾಸ್ತಿ ಇರುತ್ತದೆ.. ಇದು ಕೂಡಾ ಶರೀರಕ್ಕೆ ಒಳ್ಳೆಯದು.. ಕಣ್ಣಿಗೆ ತುಂಬಾನೇ ಒಳ್ಳೆಯದು.. ಆದ್ರೆ ಮೀನು ಆಹಾರ ಮಾಡಿದಾಗ ಅದನ್ನು ಪದೇ ಪದೇ ಕಾಯಿಸಿ ತಿನ್ನುವುದು ಒಳ್ಳೆಯದಲ್ಲ..
4.ಅಡುಗೆ ಎಣ್ಣೆ;
ಅಡುಗೆ ಎಣ್ಣೆ ಕೂಡಾ ಪದೇ ಪದೇ ಒಂದನ್ನೇ ಉಪಯೋಗಿಸಬಾರದು.. ಏನಾದರೂ ಫ್ರೈ ಮಾಡುವುದಕ್ಕೆ ಬಳಸಿದ ಎಣ್ಣೆಯನ್ನು ಹಾಗೆಯೇ ಇಟ್ಟು ಮತ್ತೊಂದು ಅಡುಗೆಗೆ ಬಳಸುತ್ತಾರೆ.. ಬೋಂಡಾ, ಬಚ್ಚಿ ಮಾಡುವವರಂತೂ ಬಳಸಿದ ಎಣ್ಣೆಯನ್ನು ನಾಲ್ಕೈದು ಬಾರಿ ಬಳಸತ್ತಾರೆ.. ಹಾಗೆ ಮಾಡುವುದರಿಂದ ಹಾನಿಕಾರಕ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ.. ಇದರಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುವುದಕ್ಕೆ ಆಸ್ಪದವಾಗುತ್ತವೆ..

Share Post