ಮಹಿಳೆಯರೇ ಕ್ಷಮಿಸಿಬಿಡಿ : ಡಿಕೆಶಿ ಸರಣಿ ಟ್ವೀಟ್
ಬೆಂಗಳೂರು : ಅತ್ಯಾಚಾರ ಆನಂದಿಸಿ ಎಂಬ ರಮೇಶ್ ಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಸರಣಿ ಟ್ವೀಟ್ ಮಾಡುವ ಮೂಲಕ ಮಹಿಳೆಯರಲ್ಲಿ ಕ್ಷಮೆ ಕೇಳಿದ್ದಾರೆ.
ರಮೇಶ್ ಕುಮಾರ್ ಅವರು ಕೂಡಲೇ ಕ್ಷಮಾಪಣೆ ಕೇಳಿದ್ದಾರೆ. ಇದರ ಬೆನ್ನಲೇ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಕೂಡ ಮಹಿಳೆಯರಲ್ಲಿ ಕ್ಷಮೆ ಕೇಳಿದ್ದಾರೆ. ನಮ್ಮ ಪಕ್ಷದವರೇ ಆದ ರಮೇಶ್ ಕುಮಾರ್ ಅವರ ಪದ ಬಳಕೆಗೆ ನಿಜಕ್ಕೂ ವಿಷಾದಿಸುತ್ತೇನೆ. ಇನ್ಮುಂದೆ ಈ ರೀತಿ ಮರುಕಳಿಸುವುದಿಲ್ಲ ಎಂದು ನಾನು ನಿಮಗೆ ಖಚಿತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
As the President of the Karnataka Pradesh Congress Committee, I am deeply saddened that such words were uttered by a Congress MLA. To all the women of Karnataka, I am sorry and I will ensure words like these are never repeated. https://t.co/xtvdoS1NpK
— DK Shivakumar (@DKShivakumar) December 17, 2021