BengaluruPolitics

ಜೆಡಿಎಸ್‌ನಿಂದ ಸ್ಪರ್ಧಿಸಲು ಯೋಗೇಶ್ವರ್‌ ನಕಾರ!; ಮುಂದಿನ ನಡೆ ಏನು..?

ಬೆಂಗಳೂರು; ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ರಂಗೇರುತ್ತಿದೆ.. ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಣೆ ಮಾಡಿದೆ.. ಆದ್ರೆ ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ.. ಆದ್ರೆ ಅಭ್ಯರ್ಥಿ ಮಾತ್ರ ಫೈನಲ್‌ ಆಗ್ತಿಲ್ಲ.. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಚಿಹ್ನೆಯಡಿ ಯೋಗೇಶ್ವರ್‌ ಸ್ಪರ್ಧೆ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದರು.. ಆದ್ರೆ ಈ ಕ್ಷೇತ್ರ ಜೆಡಿಎಸ್‌ ಪಾಲಾಗಿದೆ.. ಜೆಡಿಎಸ್‌ ಏನೋ ಯೋಗೇಶ್ವರ್‌ ಅವರಿಗೇ ಟಿಕೆಟ್‌ ಕೊಡಲು ಮುಂದಾಗಿದೆ ಎನ್ನಲಾಗಿದೆ.. ಆದ್ರೆ ಜೆಡಿಎಸ್‌ ಸೇರಿ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧೆ ಮಾಡೋದಕ್ಕೆ ಯೋಗೇಶ್ವರ್‌ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಹೀಗಾಗಿ ಇಂದು ಜೆಡಿಎಸ್‌ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ..
ಎರಡು ದಿನಗಳಿಂದ ಕಗ್ಗಂಟು ಮುಂದುವರೆದಿದೆ.. ಸಿ.ಪಿ.ಯೋಗೇಶ್ವರರ್‌ ಅವರು ಈಗಾಗಲೇ ತನ್ನ ಬೆಂಬಲಿಗರ ಜೊತೆ ಚರ್ಚೆ ಕೂಡಾ ಮಾಡಿದ್ದಾರೆ.. ಟಿಕೆಟ್‌ ಅನುಮಾನ ಎಂದು ಗೊತ್ತಾದಗಲೇ ಯೋಗೇಶ್ವರ್‌ ಪಕ್ಷೇತರವಾಗಿ ಸ್ಪರ್ಧೆ ಮಾಡೋದಕ್ಕೆ ಸಿದ್ಧತೆ ಮಾಡುತ್ತಿದ್ದರು.. ಇನ್ನೊಂದೆಡೆ ಕಾಂಗ್ರೆಸ್‌ ಕೂಡಾ ಅವರಿಗೆ ಗಾಳ ಹಾಕಿತ್ತು ಎಂಬ ಸುದ್ದಿಗಳು ಹರಿದಾಡಿದ್ದವು.. ಹೀಗಾಗಿ, ಜೆಡಿಎಸ್‌ ನಾಯಕರು ಯೋಗೇಶ್ವರ್‌ ಮನವೊಲಿಸುತ್ತಾ..? ಅಥವಾ ಅವರ ತೀರ್ಮಾನ ಏನಾಗುತ್ತೆ ಅನ್ನೋದೇ ಈಗ ಕುತೂಹಲದ ಸಂಗತಿ..
ಏನೇ ಆಗಲೀ ನನ್ನ ಸ್ಪರ್ಧೆ ಖಚಿತ ಎಂದು ಸಿ.ಪಿ.ಯೋಗೇಶ್ವರ್‌ ಪಟ್ಟು ಹಿಡಿದು ಕುಳಿತಿದ್ದಾರೆ.. ಆದ್ರೆ ಬಿಜೆಪಿ ಹೈಕಮಾಂಡೇ ಚನ್ನಪಟ್ಟಣ ಜೆಡಿಎಸ್‌ ಗೆ ನೀಡಿದೆ.. ಹೀಗಾಗಿ ಎರಡೂ ಪಕ್ಷ ನಾಯಕರು ಯೋಗೇಶ್ವರ್‌ ಮನವೊಲಿಸಲಾಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ.. ಒಂದು ವೇಳೆ ಯೋಗೇಶ್ವರ್‌ ಬಂಡಾಯವೆದ್ದರೆ ಅದು ಕಾಂಗ್ರೆಸ್‌ಗೆ ಅನುಕೂಲವಾಗಲಿದೆ.. ಈ ಹಿನ್ನೆಲೆಯಲ್ಲಿಯೇ ಯೋಗೇಶ್ವರ್‌ಗೇ ಜೆಡಿಎಸ್‌ ಟಿಕೆಟ್‌ ನೀಡೋದಕ್ಕೆ ಕುಮಾರಸ್ವಾಮಿ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.. ಆದ್ರೆ ಯೋಗೇಶ್ವರ್‌ ಅದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಲಾಗುತ್ತಿದೆ…
ನಾನೇ ಸ್ಪರ್ಧೆ ಮಾಡುವುದಾದರೆ ಅದು ಬಿಜೆಪಿ ಅಭ್ಯರ್ಥಿಯಾಗಿ ಮಾತ್ರ ಮಾಡುತ್ತೇನೆ.. ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡಿದರೆ ಏನು ನಷ್ಟ ಎಂದೂ ಪ್ರಶ್ನೆ ಮಾಡಿದ್ದಾರೆ.. ಇನ್ನು ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಪಕ್ಷದ ಮುಖಂಡರ ಸಭೆ ಕರೆಯಲಾಗಿತ್ತು.. ಆದ್ರೆ ಯೋಗೇಶ್ವರ್‌ ಬಿಕ್ಕಟ್ಟಿನಿಂದಾಗಿ ಬಿಡದಿ ತೋಡದ ಮನೆಯಲ್ಲಿ ನಡೆಯಬೇಕಿದ್ದ ಸಭೆ ದಿಢೀರ್‌ ಮುಂದಕ್ಕೆ ಹಾಕಲಾಗಿದೆ..

Share Post