CrimeNational

ರಸ್ತೆ ಬದಿಯಲ್ಲಿ ಮುಖ ಸುಟ್ಟ ಸ್ಥಿತಿಯಲ್ಲಿ ಯುವತಿ ಶವ ಪತ್ತೆ!

ಪಶ್ಚಿಮ ಬಂಗಾಳ; ರಸ್ತೆ ಬದಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ.. ಸಾವನ್ನಪ್ಪಿರುವ ಯುವತಿ ಮುಖ ಸುಡಲಾಗಿದ್ದು, ಗುರುತು ಪತ್ತೆಯಾಗಿಲ್ಲ.. ಜೊತೆಗೆ ಯುವತಿಯ ದೇಹದ ಅರ್ಧ ಭಾಗ ಬಟ್ಟೆಯೂ ಇಲ್ಲ.. ಹೀಗಾಗಿ ರೇಪ್‌ ಮಾಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ..
ಪಶ್ಚಿಮ ಬಂಗಾಲದ ಕೃಷ್ಣಾನಗರದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಕೇವಲ 500 ಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ.. ಸ್ಥಳೀಯರು ಬೆಳಗ್ಗೆ ವಾಕಿಂಗ್‌ ಮಾಡುವಾಗ ಮೃತದೇಹ ಪತ್ತೆಯಾಗಿದೆ.. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಮುಖ ಗುರುತುಸಿಗದಂತೆ ಸುಡಲಾಗಿದೆ.. ಯುವತಿಯ ಮೇಲೆ ರೇಪ್‌ ಮಾಡಿ ಕೊಲೆ ಮಾಡಿದ್ದಾರೆ.. ಅನಂತರ ಮುಖ ಗುರುತು ಸಿಗದಂತೆ ಸುಟ್ಟಿದ್ದಾರೆ ಎಂದು ತಿಳಿದುಬಂದಿದೆ..
20-21 ವರ್ಷದ ವಯಸ್ಸಿನ ಯುವತಿಯ ಶವ ಇದಾಗಿದೆ.. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..

Share Post