CrimeDistrictsHealth

ಬೀದಿ ನಾಯಿಗಳ ದಾಳಿಗೆ ಚಿತ್ರದುರ್ಗದ ಬಾಲಕ ಬಲಿ!

ಚಿತ್ರದುರ್ಗ; ಬೀದಿ ನಾಯಿಗಳ ದಾಳಿಗೆ ನವೋದಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ನವೋದಯ ಪ್ರವೇಶ ಪರೀಕ್ಷೆ ತರಬೇತಿ ಕ್ಲಾಸ್‌ಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ನಾಯಿಗಳು ದಾಳಿ ಮಾಡಿವೆ ಎಂದು ತಿಳಿದುಬಂದಿದೆ..
ರತ್ನಮ್ಮ ಎಂಬುವವರ ಮೊಮ್ಮಗ ಕೆ.ಮಿಥುನ್‌ ಎಂಬಾತನೇ ನಾಯಿ ದಾಳಿಯಿಂದ ಸಾವನ್ನಪ್ಪಿದ ಬಾಲಕನಾಗಿದ್ದಾನೆ.. ಅರುಣೋದಯ ಶಾಲೆಯಲ್ಲಿ ನವೋದಯ ಪ್ರವೇಶ ಪರೀಕ್ಷೆಯ ತರಬೇತಿ ನಡೆಯುತ್ತಿತ್ತು.. ಅದಕ್ಕಾಗಿ ಆತ ನಿನ್ನೆ ಬೆಳಗ್ಗೆ 9.30ಕ್ಕೆ ಸೈಕಲ್‌ನಲ್ಲಿ ಹೋಗಿದ್ದ.. ಬೆಳಗ್ಗೆ 10.20ರ ಸುಮಾರಿಗೆ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿದೆ.. ಇದನ್ನು ನೋಡಿದ ಮಂಜುನಾಥ್‌ ಎಂಬುವವರು ಮಿಥುನ್‌ ಪೋಷಕರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ..
ಕೆರೆ ಕೊಂಡಾಪುರ ರಸ್ತೆಯಲ್ಲಿ 4-5 ಬೀದಿ ನಾಯಿಗಳು ಮಿಥುನ್‌ ಮೇಲೆ ದಾಳಿ ಮಾಡಿವೆ.. ತಲೆ, ಕಿವಿ, ಎದೆ ಹಾಗೂ ಕೈಕಾಲುಗಳಿಗೆ ಕಚ್ಚಿ ಗಾಯಗೊಳಿಸಿದ್ದವು.. ಇದರಿಂದಾಗಿ ಮಿಥುನ್‌ಗೆ ತೀವ್ರ ರಕ್ತಸ್ರಾವವಾಗಿತ್ತು.. ತಕ್ಷಣ ಆತನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು.. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ..

Share Post