Breaking; ಶಾಸಕ ಮುನಿರತ್ನಗೆ ಜಾಮೀನು ಮಂಜೂರು
ಬೆಂಗಳೂರು; ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರ್‌ಆರ್ ನಗರ ಶಾಸಕ ಮುನಿರತ್ನಗೆ ಜಾಮೀನು ಮಂಜೂರಾಗಿದೆ.. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಮುನಿರತ್ನಗೆ ಷರತ್ತುದಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ..
ಇಂದು ಸಂಜೆ ವೇಳೆಗೆ ಅಥವಾ ನಾಳೆ ಬೆಳಗ್ಗೆ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.. ಶಾಸಕ ಮುನಿರತ್ನ ಅವರನ್ನು ಮೊದಲಿಗೆ ಜಾತಿ ನಿಂದನೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.. ಆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ಗೆ ಬಳಸಿಕೊಂಡು ಆರೋಪದ ಮೇಲೆ ಕೇಸ್ ದಾಖಲು ಮಾಡಿದ್ದರು.. ಈ ಸಂಬಂಧ ಮತ್ತೆ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು..
ಇದೀಗ ಮುನಿರತ್ನ ಅವರಿಗೆ ಕೋರ್ಟ್ ಜಾಮೀನು ನೀಡಿದೆ.. ಮುನಿರತ್ನ ಅವರು ರಾಜಕಾರಣಿಗಳನ್ನು ಹಾಗೂ ಅಧಿಕಾರಿಗಳನ್ನು ಬೆದರಿಕೆ ಕೆಲಸ ಮಾಡಿಸಿಕೊಳ್ಳಲು ಹಾಗೂ ಅಧಿಕಾರ ಗಿಟ್ಟಿಸಿಕೊಳ್ಳಲು ಅವರಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಆರೋಪವಿದೆ.. ಇದರ ಜೊತೆ ವಿರೋಧಿಗಳಿಗೆ ಹೆಚ್‌ಐವಿ ಸೋಂಕಿತರ ಬ್ಲಡ್ ಇಂಜೆಕ್ಟ್ ಮಾಡುವ ಸಂಚು ರೂಪಿಸಿದ್ದರು ಎಂದೂ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.. ಇದಕ್ಕೆ ಜೈಲಿನಿಂದ ಹೊರಬಂದ ಮೇಲೆ ಶಾಸಕ ಮುನಿರತ್ನ ಅವರೇ ಉತ್ತರ ಕೊಡಬೇಕಾಗುತ್ತದೆ.. ಬಂದಿರುವ ಆರೋಪದಲ್ಲಿ ಎಷ್ಟು ನಿಜ ಅನ್ನೋದು ಬಯಲಾಗಬೇಕಿದೆ..