Cinema

ಗಂಡನಿಗಾಗಿ ಸಿಹಿ ತಯಾರಿಸಿದ ಕ್ಯಾಟ್‌

ಮುಂಬೈ : ಮದುವೆಯ ಬಳಿಕ ನೂತನ ಮನೆಗೆ ಶಿಫ್ಟ್‌ ಆಗಿರುವ ಕತ್ರಿನಾ ಮತು ವಿಕ್ಕಿ ಜೋಡಿ ಹೊಸ ಜೀವನ ಶುರು ಮಾಡಿದೆ. ಮದುವೆಯ ಬಳಿಕ ಮೊದಲ ಬಾರಿಗೆ ಸಿಹಿ ತಯಾರಿಸಿದ್ದು ತಮ್ಮ ಇನ್ಸ್ಟಾ ಖಾತೆಯ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ನಾನೇ ಮಾಡಿದ್ದು ಎಂದು ಕೂಡ ಬರೆದುಕೊಂಡಿದ್ದಾರೆ.

ಪಂಜಾಬಿ ಸಂಪ್ರದಾಯದ ಪ್ರಕಾರ ವಧು ತಯಾರಿಸುವ ಸಿಹಿ ತಿನಿಸನ್ನು ʼಚೌಖಾ ಚಂದನಾʼ ಎಂದು ಕರೆಯಲಾಗುತ್ತದೆ. ಕತ್ರಿನಾ ಕೂಡ ಅದೇ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದಾರೆ.

Share Post