NationalPolitics

ಪ್ರತ್ಯೇಕ ದೇಶದ ವಿಚಾರ ಎತ್ತಿದರಾ ಮಾಜಿ ಸಂಸದ ಡಿ.ಕೆ.ಸುರೇಶ್‌..?

ಬೆಂಗಳೂರು; ದಕ್ಷಿಣ ಭಾರತದ ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಹೇಳುವುದರ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್‌ ಪ್ರತ್ಯೇಕ ಭಾರತದ ಮಾತನ್ನು ಮತ್ತೊಮ್ಮೆ ಪರೋಕ್ಷವಾಗಿ ಹೇಳಿದಂತೆ ಕಾಣುತ್ತಿದೆ.. ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿನ ತಾರತಮ್ಯ ಪ್ರಶ್ನೆ ಮಾಡಿರುವ ಸುರೇಶ್‌ ಅವರು, ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಹೇಳಿದ್ದಾರೆ..
ಪ್ರತ್ಯೇಕ ಭಾರತದ ಕೂಗು ನನ್ನದಲ್ಲ. ತಮಿಳುನಾಡಿನಲ್ಲಿ ಬಹಳ ಹಿಂದೆಯೇ ಈ ಕೂಗು ಇತ್ತು ಎಂದು ಡಿ.ಕೆ.ಸುರೇಶ್‌ ಹೇಳಿದ್ದಾರೆ.. ಈಗ ಮತ್ತೆ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿ ಇಂತಹದ್ದೊಂದು ಕೂಗು ಏಳಿಸಬೇಡಿ ಎಂದು ಎಚ್ಚರಿಸಿರುವ ಡಿ.ಕೆ.ಸುರೇಶ್‌, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.. ದಕ್ಷಿಣ ಭಾರತಕ್ಕೆ 28,152 ಕೋಟಿ ರೂಪಾಯಿ ತೆರಿಗೆ ಹಣ ಬಿಡುಗಡೆ ಮಾಡಲಾಗಿದೆ.. ಆದ್ರೆ ಉತ್ತರ ಪ್ರದೇಶ ರಾಜ್ಯಕ್ಕೆ ಮಾತ್ರ 32 ಸಾವಿರ ಕೋಟಿ ರೂಪಾಯಿ ರಿಲೀಸ್‌ ಮಾಡಿದ್ದಾರೆ.. ಈ ಮೂಲಕ ದಕ್ಷಿಣ ಭಾರತದವರನ್ನು ಪದೇ ಪದೇ ಕೆಣಕಲಾಗುತ್ತಿದೆ ಎಂದು ಡಿ.ಕೆ.ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Share Post